ರಾಷ್ಟ್ರೀಯ

ಬಿಗ್ ಬಾಸ್ ಬಗ್ಗೆ ಆಶಿತಾ ಬಿಚ್ಚಿಟ್ಟ ಸತ್ಯಗಳು !!!

ಬಿಗ್ ಬಾಸ್ ಬಗ್ಗೆ ಆಶಿತಾ ಬಿಚ್ಚಿಟ್ಟ ಸತ್ಯಗಳು !!!

‘ಬಿಗ್ ಬಾಸ್’  ಮನೆಯೊಳಗೆ ‘ಇಲ್ಲ ಅನ್ನೋರುಂಟೆ’ ಮೋಜಿನ ಚಟುವಟಿಕೆ ನೀಡಲಾಗಿದ್ದು, ಇದರಲ್ಲಿ ಸದಸ್ಯರು ತಮಗೆ ಚೀಟಿಯಲ್ಲಿ ಬಂದ ರೀತಿಯಲ್ಲಿ ವಿವಿಧ ಚಟುವಟಿಕೆ ಮಾಡಬೇಕಿತ್ತು. ಅದರಲ್ಲಿ ನಿವೇದಿತಾ, ಕಾರ್ತಿಕ್ ಗೆ ಸೀರೆ ಉಡಿಸಿದ್ದು, ಸಮೀರಾಚಾರ್ಯ ಅವರ ತಲೆಗೆ ಮೊಟ್ಟೆ ಹೊಡೆದ ಸನ್ನಿವೇಶ ತಮಾಷೆಯಾಗಿತ್ತು.ಕಿಚ್ಚನ್ ಟೈಮ್’ನಲ್ಲಿ ನಟಿ ಮೇಘನಾ ರಾಜ್ ಮತ್ತು ನಿರ್ದೇಶಕ ರಿಶಬ್ ಶೆಟ್ಟಿ ಅತಿಥಿಗಳಾಗಿ ಆಗಮಿಸಿದ್ದರು. ಸಿನಿಮಾ, ಲವ್, ನಿಶ್ಚಿತಾರ್ಥ, ಮದುವೆ ಕುರಿತಾಗಿ ಅವರು ಸುದೀಪ್ ಅವರೊಂದಿಗೆ ಮಾತನಾಡಿದ್ದಾರೆ. ನಂತರ ವೇದಿಕೆಯಲ್ಲಿ ಕಾಣಿಸಿಕೊಂಡ ಆಶಿತಾ ಅವರು, ‘ಬಿಗ್ ಬಾಸ್’ ಸ್ಪರ್ಧಿಗಳ ಕುರಿತಾಗಿ ಅನಿಸಿಕೆ ಹಂಚಿಕೊಂಡಿದ್ದಾರೆ. ಜಗನ್, ಅನುಪಮಾ, ಸಿಹಿಕಹಿ ಚಂದ್ರು ಆತ್ಮೀಯರಾಗಿದ್ದರು. ಮನೆಯೊಳಗೆ 57 ದಿನಗಳ ಕಾಲ ಪಡೆದ ಅನುಭವ ವಿಭಿನ್ನವಾಗಿತ್ತು. ಮನೆಯಿಂದ ಹೊರಗೆ ಬಂದಿದ್ದು ಬೇಜಾರಾಗಿದೆ ಎಂದು ತಿಳಿಸಿದ್ದಾರೆ.ಮನೆಯೊಳಗೆ ಅವರು ಕಳೆದ ಕ್ಷಣಗಳನ್ನು ತೆರೆ ಮೇಲೆ ನೋಡಿದ ಆಶಿತಾ ಭಾವುಕರಾಗಿದ್ದಾರೆ. ತಮ್ಮ ತಂದೆ ಬರೆದ ಪತ್ರವನ್ನು ಓದಿದಾಗ, ವೇದಿಕೆ ಮೇಲೆ ತಂದೆ ಕಾಣಿಸಿಕೊಂಡಾಗ ಅವರು ಕಣ್ಣೀರಿಟ್ಟಿದ್ದಾರೆ.ಮನೆಯಿಂದ ಹೊರ ಬಂದ ಕಾರಣ ತಿಳಿದಿಲ್ಲ ಎಂದು ಆಶಿತಾ ಹೇಳಿದಾಗ, ಸುದೀಪ್, ಗಿಣಿಯಾಗಿ ತೋರಿದ ಉತ್ಸಾಹ ಮೊದಲಿನಂತೆ ಇದ್ದಿದ್ರೆ ಬರುತ್ತಿರಲಿಲ್ಲವೇನೋ? ಎಂದು ಹೇಳಿದ್ದಾರೆ. ಫಿನಾಲೆಗೆ ಚಂದನ್, ಕಾರ್ತಿಕ್, ಜಯಶ್ರೀನಿವಾಸನ್, ಅನುಪಮಾ, ಜಗನ್ ಬರಬಹುದು. ಚಂದನ್ ಗೆಲ್ಲಬಹುದು. ಮುಂದಿನ ವಾರ ಶ್ರುತಿ ಮನೆಯಿಂದ ಹೊರ ಬರಬಹುದಾಗಿದೆ ಇದು ಆಶಿತಾ ಅಭಿಪ್ರಾಯ

Click to comment

Leave a Reply

Your email address will not be published. Required fields are marked *

To Top