2018 ಡಿಸೆಂಬರ್ 2ರಂದು ದಶಮಿ ಚಿಕ್ಕ ಸ್ಪಟಿಕ ದಿಂದ ಮನೆಯ ಹತ್ತಿರ ಈ ಕೆಲಸ ಮಾಡಿದರೆ ಹಣದ ಸಮಸ್ಯೆ ತೊಲಗಿ ಹೋಗುತ್ತದೆ !!!-ವಾರಭವಿಷ್ಯ 11-11-2018 To 17-11-2018-ಕೆ.ಜಿ.ಎಫ್' ಸಿನಿಮಾದ ಬಜೆಟ್ ಎಷ್ಟು ಕೋಟಿ ಗೊತ್ತಾ..!-ನೀನು ಯಡ್ಡಿ ಖಾನ್...! ನಾನೂ ಸಿದ್ದು ಖಾನ್...!-ಬಿಜೆಪಿಯಿಂದ 5 ನಾಯಕರು ಯೂಟರ್ನ್ !-ಮನೆಯಲ್ಲಿರುವ ತುಳಸಿಗಿಡ ಒಣಗಿದ್ರೆ ಏನುಆಗುತೆ ನೋಡಿ!See WhatThe Basil Dried In The House Is Dry!AloTVKannada-ಎಟಿಎಂ ಬಳಕೆದಾರರಿಗೆ ಬಹುಮುಕ್ಯವಾದ ಸುದ್ದಿ ತಪ್ಪದೆ ವೀಡಿಯೋನು ನೋಡಿ !See video news for ATM users!AloTVKannada-ಎವುಡ್ರಾ ..ಎಂದುಕಿ ವಚ್ಚಾವು..ಏಮಿ ಕಾವಾಲಿ.ರೆಡ್ಡಿ ಅತ್ತೆಯ ರಂಪಾಟ Reddy mother-in-law fire on the CCB officer-ಕಾಂಗ್ರೆಸ್ ನಾಯಕರೊಂದಿಗೆ ರೆಡ್ಡಿ ಡೀಲ್ ಲಿಂಕ್ !!! janardhan reddy deal link with congress leaders !!!-ಸಮಾಧಿಯಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳುದಕ್ಕೆ cctv ಇಟ್ಟಿದ್ದಾರೆ ನಂತರ ಏನು ನಡೀತು ಎಂದು ಗೊತ್ತಾದರೆ !
ರಾಷ್ಟ್ರೀಯ

ಭಾರತದಲ್ಲಿನ ೯ ಅಪಾಯಕಾರಿ ಸ್ಥಳಗಳು

ಭಾರತದಲ್ಲಿನ ೯ ಅಪಾಯಕಾರಿ ಸ್ಥಳಗಳು

ಭಾರತವು ವಿಭಿನ್ನ ಸಂಸ್ಕøತಿಯನ್ನು, ಭಿನ್ನ ಅನುಭವಗಳನ್ನು ಹೊಂದಿದೆ. ಈ ವಿಭಿನ್ನತೆಯೇ ನಮ್ಮ ದೈನಂದಿನ ಜೀವನದಲ್ಲಿ ಏನು ಮಾಡಬೇಕು? ಏನು ಮಾಡಬಾರದು? ಎಂದು ಕಲಿಸುತ್ತದೆ. ನಮ್ಮ ಭಾರತ ದೇಶವು ಪ್ರಪಂಚದಲ್ಲಿನ ಅನೇಕ ದೇಶಗಳನ್ನು ಆಕರ್ಷಿಸುತ್ತಿದೆ. ನಮ್ಮ ಭಾರತ ದೇಶವು ತನ್ನದೇ ಆದ ಸಂಸ್ಕøತಿಯಿಂದ ಶ್ರೀಮಂತವಾಗಿದೆ. ಇಲ್ಲಿಯೂ ಕೂಡ ಮಾನವ ಕಲ್ಪಿತವಾದ, ಮತ್ತೇ ಕೆಲವು ಪ್ರಕೃತಿಸಿದ್ಧವಾಗಿ ಏರ್ಪಟ್ಟ ಹಲವಾರು ತಾಣಗಳನ್ನು ನಾವು ಕಾಣಬಹುದು. ವಿದೇಶಕ್ಕೆ ಸರಿಸಾಟಿಯಂತೆ ಇರುವ ನಮ್ಮ ದೇಶದಲ್ಲಿಯೂ ಅನೇಕ ನಂಬಲಾಗದ ಹಾಗು ಅಪಾಯಕಾರಿ ಸ್ಥಳಗಳು ಇವೆ. ಹಾಗಾದರೆ ನಮ್ಮ ಭಾರತ ದೇಶದಲ್ಲಿನ ಅಪಾಯಕಾರಿ ಸ್ಥಳಗಳು ಯಾವುವು? ಅವುಗಳು ಎಲ್ಲಿವೆ? ಎಂಬುದನ್ನು ವಿಡಿಯೋದ  ಮೂಲಕ ಸಂಕ್ಷೀಪ್ತವಾಗಿ ಮಾಹಿತಿಯನ್ನು ಪಡೆಯೋಣ ಬನ್ನಿ.

 

ಪುತ್ತಲ್ ಆಶ್ರಮ

ಇದೊಂದು ಆದಿ ವಾಸ್ತವಿಕವಾದ ಆಶ್ರಮವಾಗಿದ್ದು, ಇದನ್ನು ಪುತ್ತಲ್ ಗುಂಪು ಎಂದು ಕೂಡ ಕರೆಯುತ್ತಾರೆ. ಬೆಟ್ಟದ ಶಿಖರದ ಮೇಲೆ ನಿರ್ಮಾಣ ಮಾಡಿರುವ ಈ ಆಶ್ರಮವು ಲಡಖ್ ಪ್ರದೇಶದಲ್ಲಿದೆ. ಅತ್ಯಂತ ಎತ್ತರದಲ್ಲಿನ ಈ ಪ್ರದೇಶಕ್ಕೆ ತಲುಪಲು ಮಾರ್ಗ ಅತ್ಯಂತ ಚಿಕ್ಕದಾಗಿರುತ್ತದೆ. ಈ ಪ್ರದೇಶದಲ್ಲಿನ ಸ್ಥಳೀಯರಿಗೆ ಇದು ಸರ್ವೇ ಸಾಧಾರಣವಾಗಿದ್ದರು ಕೂಡ ಬೇರೆಯವರಿಗೆ ಮಾತ್ರ ಕಷ್ಟವಾದುದು ಎಂದೇ ಹೇಳಬಹುದು.

 

ಡ್ರಾಸ್

ಪ್ರಪಂಚದಲ್ಲಿಯೇ 2 ನೇ ಅತ್ಯಂತ ತಂಪಾದ ಪ್ರದೇಶವಿದು. ಜಮ್ಮು-ಕಾಶ್ಮೀರದಲ್ಲಿರುವ ಈ ಪಟ್ಟಣವನ್ನು ಲಡಖ್‍ನ ಮುಖದ್ವಾರ, ಗೇಟ್ವೇ ಟು ಲಡಖ್ ಎಂದು ಕೂಡ ಕರೆಯುತ್ತಾರೆ. ಈ ಪಟ್ಟಣದಲ್ಲಿನ ಕೆಲವು ಪ್ರದೇಶದಲ್ಲಿ ಕಾರ್ಗಿಲ್ ಯುದ್ಧ ಸಮಯದಲ್ಲಿ ಅನೇಕ ದಾಳಿಗಳು ನಡೆದಿವೆ. ಭಾರತದಲ್ಲಿನ ಅಪಾಯಕಾರಿ ಸ್ಥಳಗಳು ಡ್ರಾಸ್ ಆದರೆ ಪ್ರಪಂಚದಲ್ಲಿಯೇ ಅತ್ಯಂತ ತಂಪಾಗಿರುವ ಪ್ರದೇಶದಲ್ಲಿ 2 ನೇ ಸ್ಥಾನದಲ್ಲಿದೆ. ಇಲ್ಲಿ ಹೋದವರು ಪ್ರಾಣವನ್ನು ಕೈಯಲ್ಲಿ ಹಿಡಿದು ತೆರಳಬೇಕು.

 

ಥಾರ್ ಮರುಭೂಮಿ

ಥಾರ್ ಮರುಭೂಮಿ ಎಂದ ತಕ್ಷಣ ನಮಗೆಲ್ಲಾ ನೆನಪಿಗೆ ಬರುವುದು ರಾಜಸ್ಥಾನ. ಅತ್ಯಂತ ಸುಂದರವಾಗಿರುವ ಈ ಥಾರ್ ಮರುಭೂಮಿಯು ಅಷ್ಟೇ ಅಪಾಯಕಾರಿಯಾಗಿದೆ. ನೀವು ಮುಂಜಾಗ್ರತೆಯಾಗಿ ಆಹಾರ, ನೀರು ತೆಗೆದುಕೊಂಡು ಹೋದರು ಕೂಡ ಈ ಪ್ರದೇಶದಲ್ಲಿ ಪ್ರಯಾಣ ಮಾಡುವುದು ಕಷ್ಟ ಸಾಧ್ಯವಾದುದು. ಈ ಪ್ರದೇಶದಲ್ಲಿ ಅನೇಕ ವಿಷ ಸರ್ಪಗಳು, ಕ್ರೂರಮೃಗಗಳು, ಇತರ ಜಂತುಗಳು ಇಲ್ಲಿ ಇರುವುದೇ ಇದಕ್ಕೆ ಕಾರಣವಾಗಿದೆ.

 

ಪಂಬನ್ ಬ್ರಿಡ್ಜ್

ತಮಿಳುನಾಡಿನಲ್ಲಿ ರಾಮೇಶ್ವರ ಪ್ರದೇಶದಲ್ಲಿನ ಈ ಪಂಬನ್ ಬ್ರಿಡ್ಜ್ ಹೆಸರುವಾಸಿಯಾದುದು. ಭಾರತ ದೇಶದ ಪ್ರಧಾನವಾದ ಭೂಭಾಗವನ್ನು ಸಂಪರ್ಕ ಸಾಧಿಸುವ ರೈಲು ಮಾರ್ಗವಿದು. ಸಮುದ್ರದ ಮೇಲೆ ತೆರಳುವ ಈ ರೈಲು ಮಾರ್ಗ ಕೆಳಗಿನಿಂದ ನೌಕೆಗಳು ಪ್ರಯಾಣಿಸುವುದು ನಮ್ಮನ್ನು ಆಶ್ಚರಿಗೊಳಿಸುತ್ತದೆ. ಭಾರತದಲ್ಲಿನ ಅಪಾಯಕಾರಿ ಸ್ಥಳಗಳು ಪಂಬನ್ ಬ್ರಿಡ್ಜ್ ಈ ಬ್ರಿಡ್ಜ್‍ನ ಯಂತ್ರಗಳನ್ನು ನಿರ್ವಹಿಸಲು ಸುಮಾರು 12 ಮಂದಿ ಕಾರ್ಮಿಕರು ನಿರಂತರವಾಗಿ ಕೆಲಸ ಮಾಡುತ್ತಿರುತ್ತಾರೆ. ಶತಮಾನಗಳಷ್ಟು ಇತಿಹಾಸವನ್ನು ಹೊಂದಿರುವ ಈ ಬ್ರಿಡ್ಜ್ ಅಪಾಯಕರವಾಗಿ ಮಾರ್ಪಾಟು ಮಾಡುತ್ತಿದೆ.

 

ಸಿಜು ಗುಹೆಗಳು

ಮೇಘಾಲಯ ರಾಜ್ಯದಲ್ಲಿನ ಸಿಜು ಗುಹೆಗಳು ಅತ್ಯಂತ ಅಪಾಯಕರವಾದ ಕತ್ತಲಿನ ಗುಹೆ. ಇದು ಪ್ರಪಂಚದಲ್ಲಿಯೇ ಅತ್ಯಂತ ಅಪಾಯಕಾರಿಯಾದ ಹ್ಯಾಗಿಂಗ್ ಬ್ರಿಡ್ಜ್‍ಗೆ ಹೆಸರುವಾಸಿ. ಪರ್ವತ ಶಿಖರಗಳು ಕೂಡುತ್ತಾ, ಸಹಜವಾಗಿ ನಿರ್ಮಾಣ ವಾಗಿರುವ ಈ ಬ್ರಿಡ್ಜ್ ಪ್ರವಾಸಿಗರಿಗೆ ಅತ್ಯಂತ ಭಯಭೀತರನ್ನಾಗಿಸುತ್ತದೆ.

 

ಕೈಲಾಸ ಮಾನಸ ಸರೋವರ ಯಾತ್ರೆ

ಸಮುದ್ರ ಮಟ್ಟಕ್ಕೆ ಸುಮಾರು 18.000 ಅಡಿ ಎತ್ತರದಲ್ಲಿರುವ ಈ ಕೈಲಾಸಯಾತ್ರೆಯ ಭಾಗದಂತೆಯೇ ನಮಗೆ ಮಾನಸ ಸರೋವರ ಯಾತ್ರೆ ಕೂಡ ಇರುತ್ತದೆ. ಕೆಲವು ಮಂದಿ ಯೋಗಿಗಳು, ಅನುಭವ ತಜ್ಞರು ವರ್ಷಕ್ಕೆ ಒಂದೇ ಕಾಲಿನಿಂದ ಯಾತ್ರೆಯನ್ನು ನಡೆಸುವವರು ಇಲ್ಲಿಗೆ ಪಾಲ್ಗೊಳ್ಳುತ್ತಾರೆ. ಕೆಲವರು ಪರ್ವತ ಏರುವ ಸಮಯದಲ್ಲಿ ಯಾತ್ರಿಕರು ಅಸ್ವಸ್ಥತೆಯಾಗುವ ಎಲ್ಲಾ ಅವಕಾಶವಿರುತ್ತದೆ.

 

ಭಾಂಗರ್ ಕೋಟೆ

ರಾಜಸ್ಥಾನದಲ್ಲಿರುವ ಭಯಾನಕವಾದ ಸ್ಥಳದಲ್ಲಿ ಈ ಭಾಂಗರ್ ಕೋಟೆ ಕೂಡ ಒಂದು. ಪ್ರಪಂಚ ವ್ಯಾಪಕವಾಗಿ ಪ್ರಸಿದ್ಧಿಯಾಗಿರುವ ಈ ಸ್ಥಳವು ತನ್ನ ಅದ್ಭುತವಾದ ಸೌಂದರ್ಯದಿಂದಲೇ ಆಲ್ಲದೇ ಭಯಾನಕತೆಯಿಂದಲೂ ಕೂಡ ಖ್ಯಾತಿಯನ್ನು ಪಡೆದಿದೆ. ಈ ಕೋಟೆಯಲ್ಲಿ ಆತ್ಮಗಳು ಸಂಚಾರ ಮಾಡುತ್ತಿವೆ ಎಂದು ಕೆಲವರು ಹೇಳುತ್ತಾರೆ. ರಾತ್ರಿಯ ಸಮಯದಲ್ಲಿ ಈ ಕೋಟೆಯ ಪ್ರವೇಶಕ್ಕೆ ಯಾರಿಗೂ ಅನುಮತಿಯನ್ನು ನೀಡುವುದಿಲ್ಲ. ಈ ಸ್ಥಳಕ್ಕೆ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾರೆ.

 

ಕುಲ್ದಾರಾ

ಇದು ಒಂದು ಅದೃಶ್ಯ ಗ್ರಾಮವೆಂದೇ ಹೇಳಬಹುದು. ಇದು ಕೂಡ ರಾಜಸ್ಥಾನದಲ್ಲಿದೆ. ಈ ಗ್ರಾಮವು ಸುಮಾರು 300 ವರ್ಷಗಳ ಹಿಂದೆ ಅತ್ಯಂತ ಶ್ರೀಮಂತ ಗ್ರಾಮವಾಗಿತ್ತಂತೆ. ಆರೋಗ್ಯವಂತವಾದ ಪ್ರಜೆಗಳಿಂದ ಕಂಗೊಳಿಸುತ್ತಿತ್ತು. ಇಂದು ದೆವ್ವದ ಗ್ರಾಮ ಎಂದು ಮಾರ್ಪಾಟಾಗಿದೆ.

 

ಡ್ಯೂಮಾಸ್ ಬೀಚ್

ಗುಜರಾತ್‍ನಲ್ಲಿರುವ ಈ ಬೀಚ್ ಅತ್ಯಂತ ರಹಸ್ಯಾತ್ಮಕವಾದ ಪ್ರದೇಶವಾಗಿದೆ. ಈ ಬೀಚ್‍ಗೆ ಭೇಟಿ ನೀಡಿದ ಪ್ರವಾಸಿಗರಲ್ಲಿ ಕೆಲವರು ಅದೃಶ್ಯ (ಕಾಣೆಯಾಗುವುದು) ರಾಗಿದ್ದಾರೆ ಎಂದು ದಾಖಲೆಗಳು ಇವೆ. ಇಲ್ಲಿನ ಕಪ್ಪಗಿನ ಮರಳು, ಕತ್ತಲಿನಿಂದ ಕೂಡಿದ ರಾತ್ರಿ ಮತ್ತಷ್ಟು ಭಯಾನಕತೆಯನ್ನು ಉಂಟು ಮಾಡುತ್ತದೆ. ರಾತ್ರಿಯ ಸಮಯದಲ್ಲಿ ಈ ಪ್ರದೇಶಕ್ಕೆ ನಿಷೇಧವನ್ನು ವಿಧಿಸಿದ್ದಾರೆ.

To Top