ರಾಷ್ಟ್ರೀಯ

‘ಬಿಗ್ ಬಾಸ್’ ಮನೆಯಿಂದ ಸಂಯುಕ್ತ ಹೆಗ್ಡೆ ಹೊರಹಾಕಲ್ಪಟ್ಟಿದ್ದು ಯಾಕೆ

'ಬಿಗ್ ಬಾಸ್' ಮನೆಯಿಂದ ಸಂಯುಕ್ತ ಹೆಗ್ಡೆ ಹೊರಹಾಕಲ್ಪಟ್ಟಿದ್ದು ಯಾಕೆ

ಇಷ್ಟು ದಿನ ಜೋರಾಗಿ ಮಾತನಾಡುತ್ತಿದ್ದ ನಟಿ ಸಂಯುಕ್ತ ನಿನ್ನೆ ‘ಬಿಗ್ ಬಾಸ್’ ಮನೆಯಲ್ಲಿ ಕೈಯಲ್ಲಿ ಮಾತನಾಡಿದರು. ಅದು ಸಮೀರಾಚಾರ್ಯ ಅವರ ಜೊತೆಗೆ.! ‘ಬಿಗ್ ಬಾಸ್’ ಮನೆಯೊಳಗೆ ಚಟುವಟಿಕೆ ಚಾಲ್ತಿಯಲ್ಲಿದ್ದ ಸಮಯದಲ್ಲಿ ಚಂದನ್ ಶೆಟ್ಟಿ ಮೇಲೆ ಸಂಯುಕ್ತ ಕೂತಿದ್ದರು. ತಮ್ಮನ್ನ ಬಿಡಿಸಲು ಚಂದನ್ ಶೆಟ್ಟಿ ಕೇಳಿಕೊಂಡಾಗ ಜೆಕೆ ಹಾಗೂ ಸಮೀರಾಚಾರ್ಯ ಓಡಿ ಬಂದರು. ಇದೇ ವೇಳೆ ಚಂದನ್ ಬಳಿ ಇದ್ದ ಕತ್ತರಿ ತೆಗೆದುಕೊಳ್ಳಲು ಶ್ರುತಿಗೆ ಸಂಯುಕ್ತ ಹೇಳಿದರು. ಮೂವರು ಸಂಯುಕ್ತ ಸುತ್ತ ಸುತ್ತುವರಿದಾಗ ಯಾರು ಯಾರನ್ನ ಮುಟ್ಟಿದರೋ ಗೊತ್ತಿಲ್ಲ. ಒಟ್ನಲ್ಲಿ, ”ಸಮೀರಾಚಾರ್ಯ ನನ್ನನ್ನ ಮುಟ್ಟಿದರು” ಎಂದು ಏಕ್ದಂ ಅವರ ಮೇಲೆ ಕೈ ಮಾಡಿದರು ಸಂಯುಕ್ತ ಹೆಗ್ಡೆ. ದೈಹಿಕ ಹಲ್ಲೆ ನಡೆಸಿ ಮನೆಯ ಮೂಲ ನಿಯಮ ಮುರಿದ ಕಾರಣ ಸಂಯುಕ್ತ ರನ್ನ ‘ಬಿಗ್ ಬಾಸ್’ ಹೊರ ಹಾಕಿದರು. ಸಂಯುಕ್ತ ರವರ ಈ ನಡವಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಸಮೀರಾಚಾರ್ಯ ಪತ್ನಿ ಶ್ರಾವಣಿ ಕೂಡ ಸಂಯುಕ್ತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ನವರಸ ನಾಯಕ ಜಗ್ಗೇಶ್ ಅವರು ಪ್ರತಿಕ್ರಿಯಿಸಿ ”ನಟಿ ಸಂಯುಕ್ತ ಸ್ತ್ರೀ ಕುಲಕ್ಕೆ ಕಳಂಕ ಎಂದಿದ್ದಾರೆ

Click to comment

Leave a Reply

Your email address will not be published. Required fields are marked *

To Top