ಸಿನಿಮಾ

ಇಂದಿನ 09-02-2018 ಫಿಲ್ಮ್ ಅಪ್‌ಡೇಟ್ಸ್

ಇಂದಿನ 09-02-2018 ಫಿಲ್ಮ್ ಅಪ್‌ಡೇಟ್ಸ್

* ‘ಟಗರು’ ಸಿನಿಮಾದ ಹವಾ ನೋಡಿ ಅಂದು ತಮ್ಮ ಸಿನಿಮಾಗಳನ್ನು ರಿಲೀಸ್ ಮಾಡುವ ಧೈರ್ಯವನ್ನು ಯಾರು ಮಾಡಿರಲಿಲ್ಲ. ಅದೇ ಕಾರಣಕ್ಕೆ ಫೆಬ್ರವರಿ ಮೊದಲ ವಾರದಲ್ಲಿ ಒಂದೇ ದಿನ 7 ಸಿನಿಮಾಗಳು ಬಿಡುಗಡೆಯಾಗಿತ್ತು. ಆದರೆ ಈಗ ಶಿವಣ್ಣನ ‘ಟಗರು’ ಜೊತೆಗೆ ಕನ್ನಡದ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ರಿಲೀಸ್ ಆಗುತ್ತಿದೆ. ಹೌದು,ರಾಜರಥ ಸಿನಿಮಾ ಫೆಬ್ರವರಿ 23ಕ್ಕೆ ಬರುವುದು ಪಕ್ಕಾ ಆಗಿದೆ

* ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಈ ಬಾರಿಯ ಹುಟ್ಟುಹಬ್ಬ ತುಂಬಾನೇ ಸ್ಪೆಷಲ್ ಆಗಲಿದೆ. ಒಂದು ತಿಂಗಳ ಹಿಂದೆಯಿಂದ ದರ್ಶನ್ ಹುಟ್ಟುಹಬ್ಬಕ್ಕಾಗಿ ತಯಾರಿಗಳು ಜೋರಾಗಿ ನಡೆದಿದೆ. ದರ್ಶನ್ ಮನೆಗಳ ಮುಂದೆ ಕಟೌಟ್ ಬ್ಯಾನರ್ ಗಳು ರಾರಾಜಿಸುತ್ತಿವೆ. ಅಭಿಮಾನಿಗಳು ದರ್ಶನ್ ಅವರಿಗಾಗಿ ಕೈಗಳ ಮೇಲೆ ಟ್ಯಾಟೂಗಳನ್ನ ಹಾಕಿಸಿಕೊಳ್ಳಲು ಶುರು ಮಾಡಿದ್ದಾರೆ. ಪ್ರತಿ ಜಿಲ್ಲೆಗಳಲ್ಲಿ ದರ್ಶನ್ ಅಭಿಮಾನಿ ಸಂಘಟನೆಗಳು ಹುಟ್ಟುಹಬ್ಬದಂದು ನಾನಾ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದಾರೆ.

* ಚಾಲೆಂಜಿಂಗ್ ಸ್ಟಾರ್ ಅವರ ಅಪ್ಪಟ ಅಭಿಮಾನಿ ರೇವಂತ್ ತನ್ನ ಜೀವನದ ಕೊನೆ‌ ದಿನಗಳನ್ನ ಎಣಿಸುತ್ತಿದ್ದಾರೆ. ಸುಮಾರು ದಿನಗಳಿಂದ ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವ ರೇವಂತ್ ಸಾಯುವ‌ ಮುನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನ ಭೇಟಿ ಮಾಡಬೇಕು ಎನ್ನುವ ಆಸೆಯನ್ನ ವ್ಯಕ್ತ ಪಡಿಸಿದ್ದರು.

* ನಂ.1 ಯಾರಿ ವಿತ್ ರಾಣಾ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿನ ಬಳಿಕ ವಿಯು ಕರ್ನಾಟಕದ ಕಣ್ಮಣಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರೊಂದಿಗೆ ಟಾಕ್ ಶೋ ಅನ್ನು ಆಯೋಜಿಸಿದೆ. ಶಿವರಾಜ್ ಕುಮಾರ್ ಜೊತೆ ‘ನಂ.1 ಯಾರೀ ವಿತ್ ಶಿವಣ್ಣ’ ಎಂಬ ಕಾರ್ಯಕ್ರಮವನ್ನು ನಡೆಸಲಿದೆ. ಈ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿ ಗಳ ನಿಜಜೀವನ ಮತ್ತು ಅವರ ಸ್ನೇಹಿತರೊಂದಿಗೆ ಮಾತುಕತೆ ನಡೆಯಲಿದೆ.

* ವಿಭಿನ್ನತೆಯಿಂದ ಕೂಡಿರುವ ಗೂಗಲ್ ಚಲನಚಿತ್ರ ಈ ತಿಂಗಳ 16ರಂದು ರಾಜ್ಯದ ಸಿನಿಮಾ ಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕ, ಗೀತ ರಚನೆಕಾರ, ನಟ ವಿ.ನಾಗೇಂದ್ರ ಪ್ರಸಾದ್ ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *

To Top