ರಾಜಕೀಯ

ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ

ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ

ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಹೇಳಿದ್ದಾರೆ. ರಾಜ್ಯದಲ್ಲಿ ಉತ್ತಮ ಆಡಳಿತ ಇದೆ .
ದೇಶದೆಲ್ಲೆಡೆ ಕೋಮು ಗಲಭೆಗಳನ್ನು ನಡೆಸಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಬಿಜೆಪಿಯ ಲೆಕ್ಕಾಚಾರ ಕರ್ನಾಟಕದಲ್ಲಿ ಫಲ ನೀಡುವುದಿಲ್ಲ. ಉತ್ತಮ ಆಡಳಿತದಿಂದಾಗಿ ಪಕ್ಷವು ಅಲ್ಲಿ ಅಧಿಕಾರದಲ್ಲಿ ಮುಂದುವರಿಯುವ ವಿಶ್ವಾಸವಿದೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ ಹಾಗೂ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಆಶಾಭಾವ ವ್ಯಕ್ತಪಡಿಸಿದ್ದಾರೆ.

ಸಂಸದೀಯ ಪಕ್ಷದ ಸಭೆಯಲ್ಲಿ ಗುರುವಾರ ಮಾತನಾಡಿದ ಅವರು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸಮಾನ ಮನಸ್ಕ ಪಕ್ಷಗಳೊಂದಿಗೆ ಕೈಜೋಡಿಸಿ, ಅಧಿಕಾರದಲ್ಲಿ ರುವ ಬಿಜೆಪಿಯನ್ನು ಕಿತ್ತೂಗೆಯಬೇಕೆಂದು ವಿಪಕ್ಷಗಳಿಗೆ ಕರೆ ನೀಡಿದರು. ಜತೆಗೆ ಅಧ್ಯಕ್ಷ ರಾಗಿರುವ ರಾಹುಲ್ ಗಾಂಧಿ ನನಗೂ ಬಾಸ್ ಎಂದೂ ಹೇಳಿದ್ದಾರೆ.

ಅಲ್ಲದೆ, ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿ, ಹಳಿ ತಪ್ಪಿರುವ ಭಾರತವನ್ನು ಪುನಃ ಪ್ರಜಾಪ್ರಭುತ್ವ, ಸಮಗ್ರ, ಜಾತ್ಯತೀತ, ಸಹಿಷ್ಣುತೆ ಹಾಗೂ ಆರ್ಥಿಕ ಪ್ರಗತಿಪರ ತತ್ವಗಳ ಹಾದಿಗೆ ಮರಳಿ ತರುವ ಆವಶ್ಯಕತೆ ಯಿದೆ. ಇದಕ್ಕಾಗಿ, ಕಾಂಗ್ರೆಸ್ನ ಎಲ್ಲ ಸಂಸದರು ನಿಷ್ಠೆ ಮತ್ತು ಒಗ್ಗಟ್ಟಿನಿಂದ ಕೆಲಸ ಮಾಡಬೇಕು’ ಎಂದರು.

ಇದೇ ವೇಳೆ, ಲೋಕಸಭೆಗೆ ಅವಧಿಪೂರ್ವ ಚುನಾವಣೆ ನಡೆಯಬಹುದೆಂಬ ಅನುಮಾನ ವನ್ನು ಈಗ ಸೋನಿಯಾ ಅವರೂ ವ್ಯಕ್ತಪಡಿಸಿ ದ್ದಾರೆ. ಸಭೆಯಲ್ಲಿ ಮಾತನಾಡಿದ ಅವರು, “2004ರಲ್ಲಿ ಆಗ ಅಧಿಕಾರದಲ್ಲಿದ್ದ ಬಿಜೆಪಿಯು ಅವಧಿಗೂ ಮುನ್ನವೇ ಚುನಾವಣೆಗೆ ಧುಮುಕಿತ್ತು. ಆದರೆ, ಅದರ ನಿರೀಕ್ಷೆ ಹುಸಿಯಾಯಿತು. ಈಗಲೂ ಅಂಥದ್ದೇ ಸಂದರ್ಭ ವಿದೆ. ನಿಗದಿತ ಅವಧಿಗೂ ಮುನ್ನವೇ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಹಾಗಾಗಿ, ವಿಪಕ್ಷಗಳು ಒಗ್ಗಟ್ಟಾಗುವ, ಕಾರ್ಯತಂತ್ರ ರೂಪಿಸುವ ಅಗತ್ಯವಿದೆ. ಚುನಾವಣೆಗೆ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಈಗಲೇ ಸನ್ನದ್ಧರಾಗಬೇಕು’ ಎಂದು ಹೇಳಿದರು.

 

Click to comment

Leave a Reply

Your email address will not be published. Required fields are marked *

To Top