2018 ಡಿಸೆಂಬರ್ 2ರಂದು ದಶಮಿ ಚಿಕ್ಕ ಸ್ಪಟಿಕ ದಿಂದ ಮನೆಯ ಹತ್ತಿರ ಈ ಕೆಲಸ ಮಾಡಿದರೆ ಹಣದ ಸಮಸ್ಯೆ ತೊಲಗಿ ಹೋಗುತ್ತದೆ !!!-ವಾರಭವಿಷ್ಯ 11-11-2018 To 17-11-2018-ಕೆ.ಜಿ.ಎಫ್' ಸಿನಿಮಾದ ಬಜೆಟ್ ಎಷ್ಟು ಕೋಟಿ ಗೊತ್ತಾ..!-ನೀನು ಯಡ್ಡಿ ಖಾನ್...! ನಾನೂ ಸಿದ್ದು ಖಾನ್...!-ಬಿಜೆಪಿಯಿಂದ 5 ನಾಯಕರು ಯೂಟರ್ನ್ !-ಮನೆಯಲ್ಲಿರುವ ತುಳಸಿಗಿಡ ಒಣಗಿದ್ರೆ ಏನುಆಗುತೆ ನೋಡಿ!See WhatThe Basil Dried In The House Is Dry!AloTVKannada-ಎಟಿಎಂ ಬಳಕೆದಾರರಿಗೆ ಬಹುಮುಕ್ಯವಾದ ಸುದ್ದಿ ತಪ್ಪದೆ ವೀಡಿಯೋನು ನೋಡಿ !See video news for ATM users!AloTVKannada-ಎವುಡ್ರಾ ..ಎಂದುಕಿ ವಚ್ಚಾವು..ಏಮಿ ಕಾವಾಲಿ.ರೆಡ್ಡಿ ಅತ್ತೆಯ ರಂಪಾಟ Reddy mother-in-law fire on the CCB officer-ಕಾಂಗ್ರೆಸ್ ನಾಯಕರೊಂದಿಗೆ ರೆಡ್ಡಿ ಡೀಲ್ ಲಿಂಕ್ !!! janardhan reddy deal link with congress leaders !!!-ಸಮಾಧಿಯಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳುದಕ್ಕೆ cctv ಇಟ್ಟಿದ್ದಾರೆ ನಂತರ ಏನು ನಡೀತು ಎಂದು ಗೊತ್ತಾದರೆ !
ನಿತ್ಯ ಭವಿಷ್ಯ

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ 11-02-2018

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ 11-02-2018

ಪಂಚಾಂಗ : ಭಾನುವಾರ 11.02.2018

ಸೂರ್ಯ ಉದಯ ಬೆ.06.44 / ಸೂರ್ಯ ಅಸ್ತ ಸಂ.06.27
ಚಂದ್ರ ಅಸ್ತ ಮ.02.49 / ಚಂದ್ರ ಉದಯ ರಾ.03.54
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ
ಕೃಷ್ಣ ಪಕ್ಷ / ತಿಥಿ : ಏಕಾದಶಿ (ಸಾ.05.25) / ನಕ್ಷತ್ರ: ಮೂಲ (ರಾ.10.59)
ಯೋಗ: ಹರ್ಷಣ (ಮ.12.41) / ಕರಣ: ಬಾಲವ-ಕೌಲವ (ಸಾ.05.25-ನಾ.ಬೆ.06.45)
ಮಳೆ ನಕ್ಷತ್ರ: ಧನಿಷ್ಠಾ / ಮಾಸ: ಮಕರ / ತೇದಿ: 29

ಇಂದಿನ ವಿಶೇಷ: ವಿಜಯ ಏಕಾದಶಿ

ಮೇಷ (Mesha)
ವ್ಯಾಪಾರ ವ್ಯವಹಾರದಲ್ಲಿ ವಂಚನೆಗೆ ಅವಕಾಶ ತೋರಿಬರಲಿದೆ. ಜಾಗ್ರತೆ ವಹಿಸಿರಿ. ನಿರುದ್ಯೋಗಿಗಳು ಹೆಚ್ಚಿನ ಪ್ರಯತ್ನಬಲದಿಂದ ಮುಂದುವರಿಯ ಬೇಕಾಗುತ್ತದೆ. ಜಾಗ್ರತೆ ವಹಿಸಿರಿ.
ವೃಷಭ (Vrushabh)
ಹಳೇ ಮಿತ್ರರ ಭೇಟಿ ಸಂತಸ ತಂದೀತು. ವ್ಯಾಪಾರ, ವ್ಯವಹಾರಗಳಲ್ಲಿ ತುಸುಮಟ್ಟಿನ ಹೂಡಿಕೆಯು ಲಾಭಕರವಾಗಲಿದೆ. ಮಾನಸಿಕವಾಗಿ ಹೊಂದಾಣಿಕೆ, ಸಹನೆ, ಕೋಪತಾಪಗಳನ್ನು ನಿಯಂತ್ರಿಸಿಕೊಳ್ಳುವುದು ಅಗತ್ಯವಿದೆ.
ಮಿಥುನ (Mithuna)
ವ್ಯಾಪಾರ, ವ್ಯವಹಾರಗಳು ಉತ್ತಮ ಅಭಿವೃದ್ಧಿಯನ್ನು ತೋರಿಸಿದರೂ ನೀವು ಯಾರನ್ನೂ ನಂಬಂದಂತಹ ಪರಿಸ್ಥಿತಿ ತೋರಿಬರಲಿದೆ. ಜಾಗ್ರತೆ ವಹಿಸಿರಿ. ಆರ್ಥಿಕವಾಗಿ ಜಾಗ್ರತೆ ವಹಿಸುವುದು ಉತ್ತಮ.
ಕರ್ಕ (Karka)
ಮಕ್ಕಳಿಂದ, ಹೆಂಡತಿಯಿಂದ ಸಂತಸದ ವಾತಾವರಣ. ನಿಮ್ಮ ಮನೋಕಾಮನೆಗಳನ್ನು ಚಾಲನೆಗೆ ತನ್ನಿರಿ. ಮಕ್ಕಳ ಅಭ್ಯಾಸದ ಬಗ್ಗೆ ಇನ್ನೂ ಹೆಚ್ಚಿನ ಗಮನ ಹರಿಸಿರಿ. ದೂರ ಸಂಚಾರದಲ್ಲಿ ನಿಮ್ಮ ಕಾರ್ಯಸಿದ್ಧಿಯಾಗಲಿದೆ.
ಸಿಂಹ (Simha)
ಗುರುಕೃಪೆ ಉತ್ತಮವಿರುವುದರಿಂದ ಎಲ್ಲಾ ಬಗೆಯ ವಾದ-ವಿವಾದಗಳಿಂದ, ಭಿನ್ನಾಭಿಪ್ರಾಯ, ಕೋಪ-ತಾಪಗಳನ್ನು ಎದುರಿಸಿ ಮುನ್ನಡೆ ಯುವುದು ನಿಮ್ಮ ಕರ್ತವ್ಯ. ನವ ದಂಪತಿಗಳಿಗೆ ಸದ್ಯದಲ್ಲೇ ಸಂತಾನ ಭಾಗ್ಯವಿದೆ.
ಕನ್ಯಾರಾಶಿ (Kanya)
ದಾಯಾದಿಗಳಿಂದ ಕಿರಿಕಿರಿ ತೋರಿಬಂದರೂ ನಿಮ್ಮ ಕರ್ತವ್ಯ ನಿಷ್ಠೆ ಕ್ರಿಯಾಶೀಲತೆ, ಪ್ರಯತ್ನಶೀಲತೆ ನಿಮ್ಮನ್ನು ಅಭಿವೃದ್ಧಿ ಪಥಕ್ಕೆ ಒಯ್ಯಲಿದೆ. ಅನಿರೀಕ್ಷಿತ ಧನಾಗಮನ ನಿಮ್ಮ ಕಾರ್ಯಸಿದ್ಧಿಗೆ ಅನುಕೂಲವಾಗಲಿದೆ.
ತುಲಾ (Tula)
ಸದ್ಯದಲ್ಲೇ ಅಭಿವೃದ್ಧಿ ಗೋಚರಕ್ಕೆ ಬರುವ ಕಾರಣ ನೀವು ಬಂದ ಅವಕಾಶಗಳನ್ನು ಧೈರ್ಯದಿಂದ ಪಡೆಯ ತಕ್ಕದ್ದು. ಆರ್ಥಿಕವಾಗಿ ಹೆಚ್ಚಿನ ಗಮನ ಹರಿಸಿರಿ. ಕಿರು ಸಂಚಾರ ಭಾಗ್ಯ ಕಂಡು ಬರಲಿದೆ.
ವೃಶ್ಚಿಕ (Vrushchika)
ವಿದ್ಯಾರ್ಥಿಗಳಿಗೆ ನಿರುದ್ಯೋಗಿಗಳಿಗೆ, ಯೋಗ್ಯ ವಯಸ್ಕರಿಗೆ ನಿಮ್ಮ ಕಾರ್ಯಸಾಧನೆಗೆ ಉತ್ತಮವಾದ ಅವಕಾಶಗಳಿರುತ್ತವೆ. ಮನೆಯಲ್ಲಿ ಶುಭ ಮಂಗಲ ಕಾರ್ಯ. ವೃತ್ತಿರಂಗದಲ್ಲಿ ಹಿರಿಯ ಅಧಿಕಾರಿಗಳಿಗೆ ಮುನ್ನಡೆ ಇದೆ.
ಧನು ರಾಶಿ (Dhanu)
ಹನಿಮ್ಮ ಕರ್ತವ್ಯನಿಷ್ಠೆ ಪ್ರಯತ್ನಶೀಲತೆ ಆತ್ಮವಿಶ್ವಾಸ ನಿಮಗೆ ನಿಶ್ಚಿತ ರೂಪದಲ್ಲಿ ಫ‌ಲ ನೀಡಲಿದೆ. ಆದರೂ ಹಣಕಾಸಿನ ಬಗ್ಗೆ ಜಾಗ್ರತೆ ವಹಿಸಿರಿ. ಮನೆಯಲ್ಲಿ ಶ್ರೀ ದೇವತಾ ಅನುಗ್ರಹಕ್ಕಾಗಿ ದಿನನಿತ್ಯ ಪ್ರಾರ್ಥಿಸುವುದು ಅಗತ್ಯ.
ಮಕರ (Makara)
ನಿದೂರ ಸಂಚಾರದಲ್ಲಿ ಅಡೆತಡೆಗಳು ಆಗಾಗ ತೋರಿಬಂದರೂ ನಿಮ್ಮ ಪ್ರಯತ್ನಬಲ ಕಾರ್ಯಶೀಲತೆಗೆ ನಿಶ್ಚಿತ ರೂಪದಲ್ಲಿ ಸದ್ಯದಲ್ಲೇ ಫ‌ಲ ಸಿಗಲಿದೆ. ಉದರ, ಬೆನ್ನು, ಆಹಾರದ ಬಗ್ಗೆ ಜಾಗ್ರತೆ ವಹಿಸುವುದು ಅಗತ್ಯವಿದೆ.
ಕುಂಭರಾಶಿ (Kumbha)
ಸಾಂಸಾರಿಕವಾಗಿ ಉತ್ತಮ ಅಭಿವೃದ್ಧಿ ತೋರಿಬಂದರೂ ವೈಯಕ್ತಿಕವಾಗಿ ನಿಮ್ಮ ಸಹಕಾರ, ಹೊಂದಾಣಿಕೆ ಅತೀ ಅಗತ್ಯವಿದೆ. ದೂರ ಸಂಚಾರದಲ್ಲಿ ಕಾರ್ಯಸಿದ್ಧಿಯಾದರೂ ಜಾಗ್ರತೆ ವಹಿಸುವ ಪ್ರಸಂಗ ತೋರಿಬಂದೀತು.
ಮೀನರಾಶಿ (Meena)
ಯೋಗ್ಯ ವಯಸ್ಕರ ವಿವಾಹ ಪ್ರಸ್ತಾವಗಳು ಕಂಕಣಬಲವನ್ನು ತಂದುಕೊಟ್ಟಾವು. ದಾಯಾದಿಗಳ ಬಗ್ಗೆ ಹೆಚ್ಚಿನ ವಿಶ್ವಾಸವನ್ನು ಇಟ್ಟುಕೊಳ್ಳದಿರಿ. ಕುಲದೇವರ ಸೇವಾಭಾಗ್ಯದಿಂದ ನಿಮಗೆ ಸಮಾಧಾನ ಸಿಗಲಿದೆ.

To Top