ಸಿನಿಮಾ

ಕಿಚ್ಚ ಸುದೀಪ್ ಮುಂದಿನ ಸಿನಿಮಾ ಪೈಲ್ವಾನ್

ಕಿಚ್ಚ ಸುದೀಪ್ ಮುಂದಿನ ಸಿನಿಮಾ ಪೈಲ್ವಾನ್

ಹೆಬ್ಬುಲಿ ಸಿನಿಮಾದ ನಂತರ ಕಿಚ್ಚ ಸುದೀಪ್ ಅಭಿನಯದ ಸಿನಿಮಾ ಯಾವುದು ಸೆಟ್ಟೇರಿಲ್ಲ. ಪ್ರತಿ ವಾರದ ಕೊನೆಯಲ್ಲಿ ಕಿರುತೆರೆಯ ಮೂಲಕ ಪ್ರೇಕ್ಷಕರ ಮನೆ ಅಂಗಳಕ್ಕೆ ಬಂದು ಎಲ್ಲರಿಗೂ ಮನೋರಂಜನೆ ನೀಡುತ್ತಿದ್ದ ಕಿಚ್ಚನನ್ನ ತೆರೆ ಮೇಲೆ ನೋಡುವ ಸಮಯ ಹತ್ತಿರವಾಗುತ್ತಿದೆ. ಹೆಬ್ಬುಲಿಯ ಸಕ್ಸಸ್ ನಂತರ ಕಿಚ್ಚ ಸುದೀಪ್ ಅದೇ ತಂಡದ ಜೊತೆಯಲ್ಲಿ ಸಿನಿಮಾ ಮಾಡುವುದಾಗಿ ತಿಳಿಸಿ ಅನೇಕ ದಿನಗಳು ಕಳೆದಿವೆ. ಪೈಲ್ವಾನ್ ಸಿನಿಮಾ ಮೂಲಕ ಕಿಚ್ಚ ಮತ್ತು ಗಜಕೇಸರಿ ಕೃಷ್ಣ ಒಂದಾಗುತ್ತಿದ್ದಾರೆ.

ಸುದೀಪ್ ಅವರೇ ತಿಳಿಸಿರುವಂತೆ ಈ ವರ್ಷ ಮೂರು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು ಅದರಲ್ಲಿ ಮೊದಲಿಗೆ ಪೈಲ್ವಾನ್ ಸಿನಿಮಾದಲ್ಲಿ ಕಿಚ್ಚ ಆಕ್ಟ್ ಮಾಡಲಿದ್ದಾರೆ. ಈಗಾಗಲೇ ಸಿನಿಮಾಗೆ ಸಖತ್ ತಯಾರಿ ಶುರು ಮಾಡಿದ್ದು ಕಿಚ್ಚ ಸುದೀಪ್ ತಮ್ಮ ಮುಂದಿನ ಸಿನಿಮಾದ ಪಾತ್ರಕ್ಕಾಗಿ ವರ್ಕ್ ಔಟ್ ಶುರು ಮಾಡಿದ್ದಾರೆ . ಕಿಚ್ಚ ಸುದೀಪ್ ಇದೇ ಮೊದಲ ಬಾರಿಗೆ ಜಿಮ್ ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ ಪ್ರೇಕ್ಷಕರ ಮುಂದೆ ಬೇರೆಯದ್ದೇ ಸ್ಟೈಲ್ ನಲ್ಲಿ ಬರಲಿದ್ದಾರೆ. ಪೈಲ್ವಾನ್ ಹೆಸರಿಗೆ ತಕ್ಕಂತೆ ಬಾಡಿ ಬಿಲ್ಡ್ ಮಾಡಲಿದ್ದಾರೆ ಜೆ ಪಿ ನಗರದ ಖಾಸಗಿ ಜಿಮ್ ನಲ್ಲಿ ಕಿಚ್ಚ ವರ್ಕ್ ಮಾಡುತ್ತಿದ್ದು ವಿಕ್ರಂ ಎನ್ನುವವರು ಟ್ರೈನಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ.

Click to comment

Leave a Reply

Your email address will not be published. Required fields are marked *

To Top