ರಾಜಕೀಯ

ರಾಹುಲ್ ಗಾಂಧಿಯ ಜನಾಶೀರ್ವಾದ ಯಾತ್ರೆ

ರಾಹುಲ್ ಗಾಂಧಿಯ ಜನಾಶೀರ್ವಾದ ಯಾತ್ರೆ

ರಾಹುಲ್ ಗಾಂಧಿಯ ಜನಾಶೀರ್ವಾದ ಯಾತ್ರೆ ಇಂದು ರಾಯಚೂರಿನ ಸಿಂಧನೂರಿನಲ್ಲಿ ಬಹಿರಂಗ ಸಭೆ ನಡೆಯಲಿದ್ದು ನಂತರ ಯಾದಗಿರಿಗೆ ಹೋಗಲಿದ್ದಾರೆ.

ಯುಪಿಎ ಅಧ್ಯಕ್ಷ ರಾಹುಲ್ ಗಾಂಧಿ ಜನಾಶೀರ್ವಾದ ಯಾತ್ರೆ ಹೈದರಾಬಾದ್ ಕರ್ನಾಟಕದ ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಪ್ರವಾಸ ಪೂರ್ಣಗೊಂಡಿದೆ. ಈಗಾಗಲೇ ರಾಯಚೂರಿನಲ್ಲಿರುವ ರಾಹುಲ್, ಇಂದು ಯಾದಗಿರಿಯತ್ತ ತೆರಳಲಿದ್ದಾರೆ.

ಹೈದ್ರಾಬಾದ್ ಕರ್ನಾಟಕದಲ್ಲಿ ಮಿಂಚಿನ ಸಚಾರ ನಡೆಸುತ್ತಿರುವ ರಾಹುಲ್ ಗಾಂಧಿ ಎಂದಿನ ತಮ್ಮ ಟಾರ್ಗೆಟ್ ಮೋದಿ ಮಾತನ್ನ ಮುಂದುವೆಸಿದ್ದಾರೆ. ಸಂಜೆ ರಾಯಚೂರಿನ ಸಿಂಧನೂರಿನಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ನರೇಂದ್ರ ಮೋದಿ ಕೇವಲ ಗತ ಕಾಲದ ಬಗ್ಗೆ ಮಾತನಾಡದೇ ಅಭಿವೃದ್ಧಿಗೆ ಒತ್ತು ಕೊಡಿ, ಅಭಿವೃದ್ಧಿ ವಿಚಾರದಲ್ಲಿ ಸಿದ್ಧರಾಮಯ್ಯ ನವರನ್ನ ನೋಡಿ ಕಲಿಯಬೇಕಿದೆ ಅಂತಾ ಹರಿಹಾಯ್ದರು.

ಇವತ್ತು ರಾಯಚೂರಿನ ಗಂಜ್, ಕಲ್ಮಲಾದಲ್ಲಿ ರೋಡ್ ಶೋ ನಡೆಸಿ ಬಳಿಕ ದೇವದುರ್ಗದ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಆನಂತರ ಯಾದಗಿರಿ ಜಿಲ್ಲೆ ಶಹಾಪೂರ ತಾಲೂಕಿನಲ್ಲಿ ರೋಡ್​​ ಶೋ ನಡೆಸಲಿದ್ದಾರೆ. ಬಳಿಕ ಹತ್ತಿಗೂಡುರದಿಂದ ಶಹಾಪೂರ ಮಾರ್ಗವಾಗಿ ಕಲಬುರಗಿಗೆ ತೆರಳಲಿದ್ದಾರೆ.

Click to comment

Leave a Reply

Your email address will not be published. Required fields are marked *

To Top