ಸಿನಿಮಾ

ಗಣೇಶ್‌ ‘ಆರೆಂಜ್’ ಚಿತ್ರತಂಡ ಸರ್‌ಪ್ರೈಸ್‌ ಗಿಫ್ಟ್‌ !

ಗಣೇಶ್‌ 'ಆರೆಂಜ್' ಚಿತ್ರತಂಡ ಸರ್‌ಪ್ರೈಸ್‌ ಗಿಫ್ಟ್‌ !

ಇಂದು ಗೋಲ್ಡನ್ ಸ್ಟಾರ್ ಗಣೇಶ್‌ ಹಾಗೂ ಶಿಲ್ಪಾ ದಂಪತಿಯ 10ನೇ ವಿವಾಹ ವಾರ್ಷಿಕೋತ್ಸವ. ವೆಡ್ಡಿಂಗ್‌ ಆ್ಯನಿವರ್ಸರಿ ಖುಷಿಯಲ್ಲಿರುವ ಈ ಜೋಡಿಗೆ ‘ಆರೆಂಜ್’ ಚಿತ್ರತಂಡ ಸರ್‌ಪ್ರೈಸ್‌ ಗಿಫ್ಟ್‌ ನೀಡಿದೆ
ಹೌದು, ಗೋಲ್ಡನ್‌ ಸ್ಟಾರ್‌ ಗಣೇಶ್ ಅವರ ಕಳೆದ ಹುಟ್ಟುಹಬ್ಬದಂದು ‘ಆರೆಂಜ್’ ಚಿತ್ರದ ಟೈಟಲ್ ಬಿಡುಗಡೆಯಾಗಿತ್ತು. ಇವತ್ತು ಮತ್ತೊಂದು ಉಡುಗೊರೆ ನೀಡಿರುವ ಪ್ರಶಾಂತ್‌, ‘ಆರೆಂಜ್‌’ ಚಿತ್ರಕ್ಕೆ ಮುಹೂರ್ತ ನೆರವೇರಿಸಿದ್ದಾರೆ.
ಜೂಮ್‌’ ಬಳಿಕ ಗಣೇಶ್‌ ಮತ್ತು ಪ್ರಶಾಂತ್‌ರಾಜ್‌ ಒಟ್ಟಿಗೆ ಸೇರಿ ಮಾಡುತ್ತಿರುವ ಚಿತ್ರವಿದು. ಸಂತೋಷ್‌ ರೈ ಪಾತಾಜೆ ಛಾಯಾಗ್ರಹಣವಿದೆ. ಬಹದ್ದೂರ್‌ ಚೇತನ್‌, ನಟರಾಜ್‌ ಸಂಭಾಷಣೆ ಬರೆಯುತ್ತಿದ್ದಾರೆ. ರವಿವರ್ಮ ಸಾಹಸವಿದೆ.
ನಾಯಕಿ ಮತ್ತು ಸಂಗೀತ ನಿರ್ದೇಶಕರ ಆಯ್ಕೆ ಬಾಕಿ ಇದೆ. ಈ ಹಿಂದೆ ಜೂಮ್‌ ಚಿತ್ರದಲ್ಲಿ ಗಣೇಶ್‌ ಅವರ ಹೇರ್‌ಸ್ಟೈಲ್‌ ಬದಲಾಗಿತ್ತು. ಸಖತ್‌ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದರು. ಈಗ “ಆರೆಂಜ್‌’ ಚಿತ್ರದಲ್ಲೂ ಗಣೇಶ್‌ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. “ಆರೆಂಜ್‌’ ಚಿತ್ರದಲ್ಲೂ ಗಣೇಶ್‌ ಅವರ ಪಾತ್ರ ಕಲರ್‌ಫ‌ುಲ್‌ ಆಗಿದ್ದು, ಅದಕ್ಕೆ ತಕ್ಕಂತೆ ಅವರ ಗೆಟಪ್‌ ಕೂಡಾ ಇರಲಿದೆ.

Click to comment

Leave a Reply

Your email address will not be published. Required fields are marked *

To Top