ಸಿನಿಮಾ

ದಿ ವಿಲ್ಲನ್ ಸಿನಿಮಾ ಸ್ಯಾಟಲೈಟ್ ರೈಟ್ಸ್

ದಿ ವಿಲ್ಲನ್ ಸಿನಿಮಾ ಸ್ಯಾಟಲೈಟ್ ರೈಟ್ಸ್

ಸುದೀಪ್ ಶಿವಣ್ಣ ಕಾಂಬಿನೇಷನ್ನಿನ ದಿ ವಿಲನ್ ಚಿತ್ರ ದಿನೇ ದಿನೇ ನಿರೀಕ್ಷೆಯನ್ನು ಹೆಚ್ಚಿಸುತ್ತಿದ್ದು ಬಿಡುಗಡೆಗೆ ಮುನ್ನವೇ ದಿ ವಿಲನ್ ಚಿತ್ರ ದಾಖಲೆಯೊಂದನ್ನ ಬರೆದಿದೆ.. ಸಿನಿಮಾ ಶೂಟಿಂಗ್ ಆರಂಭವಾದಾಗಿನಿಂದ ಸದಾ ಒಂದಲ್ಲೊಂದು ವಿಷಯಕ್ಕೆ ಸುದ್ದಿಯಲ್ಲಿರುವ ಪ್ರೇಮ್ ನಿರ್ದೇಶನದ ದಿ ವಿಲ್ಲನ್ ಚಿತ್ರದ ಸ್ಯಾಟಲೈಟ್ ರೈಟ್ಸ್ 7.3 ಕೋಟಿ ರು.ಗೆ ಮಾರಾಟ ವಾಗಿದೆ.

ಶಿವರಾಜ್ ಕುಮಾರ್, ಸುದೀಪ್ ಮತ್ತು ಆ್ಯಮಿ ಜಾಕ್ಸನ್ ಅಭಿನಯದ ಸಿನಿಮಾ ಬಿಡುಗಡೆಗೆ ಮುನ್ನವೇ ಭರ್ಜರಿ ಹಣ ಗಳಿಸಿರುವುದನ್ನು ನಿರ್ದೇಶಕ ಪ್ರೇಮ್ ಟ್ವೀಟ್ ಮಾಡಿದ್ದಾರೆ.

ತೆಲುಗು ಮತ್ತು ತಮಿಳಿಗಿಂತ ವಿಲ್ಲನ್ ದಾಖಲೆಯ ಬೆಲೆಗೆ ಮಾರಾಟವಾಗಿದ್ದು, ಕಲಾವಿದರು ಮತ್ತು ನಿರ್ಮಾಪಕರಿಗೆ ಪ್ರೇಮ್ ಧನ್ಯವಾದ ಅರ್ಪಿಸಿದ್ದಾರೆ. ಆದರೆ ಎಷ್ಟು ಹಣಕ್ಕೆ ಮಾರಾಟವಾಗಿದೆ ಎಂಬುದನ್ನು ಪ್ರೇಮ್ ಬಹಿರಂಗ ಪಡಿಸಿಲ್ಲ, ಸಿನಿಮಾ ಮೂಲಗಳು ಇದನ್ನು ಸ್ಪಷ್ಟಪಡಿಸಿವೆ. ಜೀ ಕನ್ನಡ ವಾಹಿನಿ ಸಿನಿಮಾದ ಸ್ಯಾಟ್ ಲೈಟ್ ಹಕ್ಕನ್ನು ಖರೀದಿಸಿದೆ. ಹಿಂದಿ ರೈಟ್ಸ್ ಗಾಗಿ 5.4 ಕೋಟಿ ರು ಪಡೆದುಕೊಂಡಿದೆ.

To Top