ಆರೋಗ್ಯ

ಶೇಂಗಾ ತಿನ್ನೋದರಿಂದ ಲಾಭಗಳು

ಶೇಂಗಾ ತಿನ್ನೋದರಿಂದ ಲಾಭಗಳು

ಶೇಂಗಾ ತಿನ್ನೋದರಿಂದ ಲಾಭಗಳು

1 ಆ್ಯಂಟಿ ಆಕ್ಸಿಡೆಂಟ್‌ :
ಶೇಂಗಾದಲ್ಲಿ ಒಲೆಸಿ ಆಸಿಡ್‌ ಇರುತ್ತದೆ. ಇದು ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡಿ ಆರೋಗ್ಯ ಉತ್ತಮವಾಗಿರಲು ಸಹಾಯ ಮಾಡುತ್ತದೆ. ಇದು ಚರ್ಮದ ಆರೋಗ್ಯಕ್ಕೆ ಸಹ ಉತ್ತಮ ಆಹಾರವಾಗಿದೆ.

2 ಜೀರ್ಣಕ್ರಿಯೆ ಮತ್ತು ಮಧುಮೇಹ ನಿಯಂತ್ರಣ :
ಶೇಂಗಾ ಬೆಣ್ಣೆ ಜೀರ್ಣವಾಗಲು ತುಂಬಾ ಸಮಯ ಬೇಕು. ಇದರಿಂದಾಗಿ ದೇಹದಲ್ಲಿ ಸಕ್ಕರೆಯ ಮಟ್ಟ ಸ್ಥಿರವಾಗಿರುತ್ತದೆ. ಇದರ ಸೇವನೆಯಿಂದ ಒಟ್ಟು ಜೀರ್ಣಕ್ರಿಯೆಗಳು ಸುಸ್ಥಿತಿಯಲ್ಲಿರುತ್ತವೆ ಹಾಗೂ ಹೊಟ್ಟೆಯನ್ನು ವಿವಿಧ ಸೋಂಕುಗಳಿಂದ ರಕ್ಷಿಸುತ್ತದೆ.

3 ಹೃದಯದ ಆರೋಗ್ಯ :
ಶೇಂಗಾ ಬೆಣ್ಣೆಯಲ್ಲಿ ಪ್ರೋಟಿನ್ ಅತ್ಯಧಿಕವಾಗಿದೆ. ಇದರಲ್ಲಿ ಆರೋಗ್ಯಕಾರಿ ಕೊಬ್ಬು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ ಹಾಗೂ ಹೃದಯವನ್ನು ಕಾಪಾಡುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವ ಮೂಲಕ ಹೃದಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

To Top