ರಾಷ್ಟ್ರೀಯ

ಬಿಪಿಎಲ್ ಕಾರ್ಡ್ ಎಪಿಲ್ ಕಾರ್ಡ್ ಹೊಂದಿರುವರಿಗೆ ಸಿಹಿ ಸುದ್ದಿ

ರಾಜ್ಯದಲ್ಲಿ ಎಲ್ಲ ಅರ್ಹರಿಗೂ ಪಡಿತರ ಚೀಟಿ ಸಿಗುವಂತಾಗಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಮಾನದಂಡಗಳನ್ನು ಸಡಿಲಗೊಳಿಸಲಾಗಿದೆ. ಕೇವಲ ಆಧಾರ್ ಕಾರ್ಡ್ ಆಧಾರದ ಮೇಲೆ ಪಡಿತರ ಚೀಟಿ ಸಿಗುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ 10 ದಿನದೊಳಗೆ ಅರ್ಜಿದಾರರ ಮನೆ ವಿಳಾಸಕ್ಕೆ ಕಾರ್ಡು ತಲುಪಲಿದೆ ಎಂದು ಆಹಾರ ಸಚಿವ ಯು.ಟಿ.ಖಾದರ್ ಹೇಳಿದರು.

ಅವರು ಮಂಗಳವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಯೋಮೆಟ್ರಿಕ್ ವಿಧಾನದಿಂದ ಎಲ್ಲರೂ ಪಡಿತರ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ಅಲೆಮಾರಿಗಳು, ಕೂಲಿ ಕಾರ್ಮಿಕರು ತಾವು ಕೆಲಸ ಮಾಡುವ ಊರು, ಸ್ಥಳಗಳಲ್ಲೇ ಪಡಿತರ ಪಡೆಯುವಂತ ಪೋರ್ಟಬಿಲಿಟಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಪಡಿತರ ಚೀಟಿ ಹೊಂದಿರುವವರು ರಾಜ್ಯದ ಯಾವುದೇ ಮೂಲೆಯ ಪಡಿತರ ಅಂಗಡಿಯಿಂದ ಪಡಿತರವನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಅವರು ಮಾತನಾಡಿ ಈ ಯೋಜನೆಯು ದೇಶದಲ್ಲೇ ಪ್ರಥಮವಾಗಿ ರಾಜ್ಯದಲ್ಲಿ ಪೋರ್ಟಬಿಲಿಟಿ ವ್ಯವಸ್ಥೆಯನ್ನು ಈಗ ಜಾರಿಗೊಳಿಸಲಾಗಿದ್ದು, ನಿರ್ದಿಷ್ಟ ಅಂಗಡಿಯಿಂದಲೇ ಪಡಿತರ ಪಡೆಯಲು ಕಾಯಬೇಕಾಗಿಲ್ಲ. ತಾವು ಎಲ್ಲಿರುತ್ತಿರೋ ಅಲ್ಲಿನ ಪಡಿತರ ಅಂಗಡಿಯಿಂದ ಪಡೆಯಬಹುದಾಗಿದೆ. ಎಪಿಎಲ್, ಬಿಪಿಎಲ್ ಕಾರ್ಡುದಾರರ ನಡುವಿನ ತಾರತಮ್ಯ ನಿವಾರಿಸಲು ಮಾನದಂಡಗಳನ್ನು ಪುನರ್ ರೂಪಿಸಲಾಗಿದೆ. 1.20 ಲಕ್ಷ ರೂ. ಆದಾಯ ಹೊಂದಿರುವ, 7 ಎಕರೆ ಜಮೀನು ಹೊಂದಿ ಸ್ವಂತ ಕಾರು, ಸರ್ಕಾರಿ ನೌಕರಿ ಇದ್ದರೆ ಅವರು ಎಪಿಎಲ್ ವ್ಯಾಪ್ತಿಗೆ ಬರುತ್ತಾರೆ ಎಂದು ಮಾಹಿತಿ ನೀಡಿದರು.

Click to comment

Leave a Reply

Your email address will not be published. Required fields are marked *

To Top