ರಾಷ್ಟ್ರೀಯ

ಬಿ ಪಿ ಎಲ್ ಕಾರ್ಡುದಾರರಿಗೆ ಮತ್ತೊಂದು ಸಿಹಿ ಸುದ್ದಿ

ಸರ್ಕಾರದಿಂದ ಒಂದಲ್ಲಾ ಒಂದು ಯೋಜನೆ ಬರುತ್ತಲೇ ಇರುತ್ತದೆ.. ಅದರಲ್ಲೂ ಬಿ ಪಿ ಎಲ್ ಕಾರ್ಡುದಾರರಿಗೆ ಅನುಕೂಲಗಳು ತುಸು ಹೆಚ್ಚೆಂದು ಹೇಳಬಹುದು.. ಆದರೆ ಇದರ ಮಾಹಿತಿ ತಿಳಿಯದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.. ಅದಕ್ಕಾಗಿ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ..

ಸರ್ಕಾರದ ವತಿಯಿಂದ ಬಿ ಪಿ ಎಲ್ ಕಾರ್ಡುದಾರರಿಗೆ ಅನುಕೂಲ ವಾಗಲೆಂದು ಒಂದು ಯೋಜನೆಯನ್ನು ಪಶು ಸಂಗೋಪನೆ ಇಲಾಖೆ ವತಿಯಿಂದ ಬಿಡುಗಡೆ ಮಾಡುತ್ತಿದ್ದಾರೆ.. ಈ ಯೋಜನೆ ಅಡಿಯಲ್ಲಿ ಬಿ ಪಿ ಎಲ್ ಕಾರ್ಡ್ ದಾರರಿಗೆ ಪಶುಪಾಲನೆ ಮಾಡಲು ಕುರಿ ಕೋಳಿ ಮೇಕೆಗಳನ್ನು ನೀಡಲು ಮುಂದಾಗಿದ್ದಾರೆ..

ಈಗಾಗಲೇ ಪಶುಭಾಗ್ಯ ಯೋಜನೆ ಅಡಿಯಲ್ಲಿ ಹಲವಾರು ಮಂದಿಗೆ ಪಶುಗಳನ್ನು ನೇಡುತ್ತಿದ್ದಾರೆ.. ಆದರೇ ಈ ಯೋಜನೆಯನ್ನು ಎಲ್ಲಾ ಬಿ ಪಿ ಎಲ್ ಕಾರ್ಡ್ ದಾರರಿಗೆ ವಿಸ್ತರಿಸಲು ಚಿಂತನೆ ಮಾಡಿದ್ದಾರೆ..

ಪಶುಸಂಗೋಪನೆ ಸಚಿವರಾದ ಎ.ಮಂಜು ರವರು ತಿಳಿಸಿರುವ ಪ್ರಕಾರ ವಾರ್ಷಿಕವಾಗಿ ಒಬ್ಬ ಮನುಷ್ಯ 11 ಕೆ ಜಿ ಮಾಂಸವನ್ನು ಸೇವನೆ ಮಾಡುತ್ತಿದ್ದಾನಂತೆ.. ಆದರೆ ಉತ್ಪಾದನೆಯಾಗುತ್ತಿರುವುದು ಕೇವಲ 3 ಕೆ ಜಿ ಮಾಂಸವಷ್ಟೇ.. ಇನ್ನುಳಿದ ಮಾಂಸವನ್ನು ಹೊರ ರಾಜ್ಯಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.. ಅದಕ್ಕಾಗಿ ಮಾಂಸದ ಉತ್ಪಾದನೆಯನ್ನು ಹೆಚ್ಚು ಮಾಡಲು ಸರ್ಕಾರ ಈ ನಿರ್ಧಾರವನ್ನು ಕೈಗೊಳ್ಳುತ್ತಿದೆ..

ಈ ಯೋಜನೆಯಡಿಯಲ್ಲಿ ಪ್ರತಿ ಕುಟುಂಬಕ್ಕೆ 2 ಕುರಿ, ಮೇಕೆ ಮತ್ತು ಒಂದಷ್ಟು ಕೋಳಿಗಳನ್ನು ನೀಡಲಾಗುತ್ತದೆ..‌ ಇದನ್ನು ಸಾಕುವುದರ ಮೂಲಕ ಜನರು 40 ಸಾವಿರ ರೂಪಾಯಿಗಳಷ್ಟು ಆದಾಯವನ್ನು ಪಡೆಯಬಹುದಾಗಿದೆ..

Click to comment

Leave a Reply

Your email address will not be published. Required fields are marked *

To Top