ಜಿಯೋ ನ್ಯೂಸ್

ಈ ಕಾರಣನಿಂದ ಜಿಯೋ ಪ್ರೈಮ್ ಸದಸ್ಯತ್ವದ ಅವಧಿ ವಿಸ್ತರಣೆ ಮಾಡಿದೆ !

ರಿಲಯನ್ಸ್ ಮಾಲೀಕತ್ವದ ಜಿಯೋ ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಕ್ರಾಂತಿಯ ಅಲೆಯನ್ನು ಹುಟ್ಟಿಹಾಕಿರುವುದನ್ನು ನಾವು ಕಾಣಬದಾಗಿದೆ. ಇದೇ ಮಾರ್ಚ್ 31 ರಂದು ಕೊನೆಯಾಗುತ್ತಿದ್ದ ತನ್ನ ಪ್ರೈಮ್ ಸದಸ್ಯತ್ವವನ್ನು ಮತ್ತೇ ಒಂದು ವರ್ಷಗಳ ಕಾಲ ವಿಸ್ತರಿಸುವ ಘೋಷಣೆಯನ್ನು ಜಿಯೋ ಮಾಡಿದೆ. ಈ ಹಿನ್ನಲೆಯಲ್ಲಿ ಪ್ರತಿ ಬಾರಿ ಜಿಯೋ ಯೋಜನೆಯನ್ನು ನೀಡಲು ಒಂದೊಂದು ಕಾರಣ ಇದ್ದೇ ಇರಲಿದೆ. ಈ ಬಾರಿಯೂ ಒಂದು ಕಾರಣ ಇದೆ.

ಜಿಯೋ ಸೇವೆಯನ್ನು ಆರಂಭಿಸಿ ಎರಡು ವರ್ಷ ಕಳೆಯುತ್ತಾ ಬಂದಿದ್ದು, ಜಿಯೋ ಬಳಕೆದಾರರು ಸಂಖ್ಯೆ ಏರುಗತಿಯಲ್ಲಿ ಸಾಗುತ್ತಲೇ ಇದೆ. ಇದೇ ಮಾದರಿಯಲ್ಲಿ ಇದೇ ತಿಂಗಳಲ್ಲಿ ಜಿಯೋ ತನ್ನ ಬಳಕೆದಾರರ ಸಂಖ್ಯೆಯನ್ನು 175 ಮಿಲಿಯನ್‌ಗೆ ವಿಸ್ತರಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ಈ ಸಂಭ್ರಮವನ್ನು ತನ್ನ ಬಳಕೆದಾರರೊಂದಿಗೆ ಹಂಚಿಕೊಳ್ಳುವ ಸಲುವಾಗಿ ಪ್ರೈಮ್ ಸೇವೆಯ ಅವಧಿಯನ್ನು ಒಂದು ವರ್ಷದ ಅವಧಿಗೆ ಉಚಿತವಾಗಿ ವಿಸ್ತರಿಸಿದೆ ಎನ್ನಲಾಗಿದೆ. 2019ರ ಮಾರ್ಚ್ 31ರ ವರೆಗೂ ಜಿಯೋ ಪ್ರೈಮ್ ಸದಸ್ಯರು ಜಿಯೋ ನೀಡುವ ಉಚಿತ ಸೇವೆಗಳ ಲಾಭವನ್ನು ಪಡೆಯಬಹುದಾಗಿದೆ.

Click to comment

Leave a Reply

Your email address will not be published. Required fields are marked *

To Top