ಜಿಯೋ ನ್ಯೂಸ್

ಜಿಯೋ ಜ್ಯೂಸ್ ಎನ್ನುವ ಬ್ಯಾಟರಿ ಸೇವರ್ ಆಪ್

ಮಾರ್ಚ್ 31ಕ್ಕೆ ಪ್ರೈಮ್ ಸದಸ್ಯತ್ವ ಕೊನೆಯಾಗಲಿದ್ದು, ಜಿಯೋ ಅಂದು ಹೊಸ ಸೇವೆಯನ್ನು ನೀಡಲಿದೆ ಎಂದು ಕಾಯುತ್ತ ಕುಳಿತಿದ್ದ ಬಳಕೆದಾರರನ್ನು ತನ್ನ ಹೊಸ ಆಡ್ ಮೂಲಕ ಜಿಯೋ ಮೂರ್ಖರನ್ನಾಗಿಸಿದೆ. ಜಿಯೋ ಜ್ಯೂಸ್ ಎನ್ನುವ ಬ್ಯಾಟರಿ ಸೇವರ್ ಆಪ್ ವೊಂದನ್ನು ಬಿಡುಗಡೆ ಮಾಡಲಿದೆ ಎನ್ನವ ಆಡ್ ವೊಂದನ್ನು ಬಿಡುಗಡೆ ಮಾಡುವ ಮೂಲಕ ಹೊಸದೊಂದು ಸೇವೆಯನ್ನು ನೀಡುವುದಾಗಿ ಹೇಳಿತ್ತು.

ಆದರೆ ಜಿಯೋ ನೀಡಿದ್ದ ಹೊಸ ಆಡ್‌ ನೋಡಿ ಹಲವು ಬಳಕೆದಾರರು ಹೊಸ ಆಪ್ ಬರಲಿದೆ ಎಂದು ನಂಬಿದ್ದರು ಸಹ. ಆದರೆ ಇದು ಏಪ್ರಿಲ್ 1 ರಂದು ಮೂರ್ಖರ ದಿನ ಆಗಿದ್ದರಿಂದ ಬಳಕೆದಾರರನ್ನು ಮೂರ್ಖರನ್ನಾಗಿಸುವ ಪ್ರಯತ್ನ ಎನ್ನಲಾಗಿದೆ. ಇದರಲ್ಲಿ ಜಿಯೋ ಯಶಸ್ಸು ಸಹ ಆಗಿದೆ. ಜಿಯೋ ಜ್ಯೂಸ್ ಕುರಿತು ಆಡ್ ವೊಂದನ್ನು ಬಿಡುಗಡೆ ಮಾಡಿದ ಜಿಯೋ, ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಬ್ಯಾಟರಿ ಖಾಲಿಯಾಗುವುದಿಲ್ಲ, ಪೋನಿಗೆ ಜಿಯೋ ಸಿಮ್ ಹಾಕಿದೆರೆ ಸಾಕು, ನಿಮ್ಮ ಸ್ಮಾರ್ಟ್‌ಫೋನ್ ಚಾರ್ಜ್ ಆಗಲಿದೆ ಎನ್ನುವ ಆಡ್ ವೊಂದನ್ನು ನೀಡಿತ್ತು. ಆದರೆ ಇದು ಸುಳ್ಳು ಎನ್ನಲಾಗಿದ್ದು, ಮೂರ್ಖರ ದಿನದ ಅಂಗ ಬಿಡುಗಡೆ ಮಾಡಲಾದ ಆಡ್ ಎನ್ನಲಾಗಿದ್ದು, ಬಳಕೆದಾರರ ಗಮನವನ್ನು ಸೆಳೆದು ಮೂರ್ಖರನ್ನಾಗಿ ಮಾಡುವುದು ಇದರ ಉದ್ದೇಶವಾಗಿತ್ತು.

Click to comment

Leave a Reply

Your email address will not be published. Required fields are marked *

To Top