ನೂರಕ್ಕೆ 99 % ಜನ ಮಂದಿರಕ್ಕೆ ಹೋಗುವವರು ಈ ತಪ್ಪುಗಳು ಮಾಡುತ್ತಿರುತ್ತರೆ ಅದರಿಂದ ದರಿದ್ರ ಕಟ್ಟಿಕಾಡುತ್ತದೆ !-ಓಕ್ ಐಲ್ಯಾಂಡ್ ನಲ್ಲಿ ಇರುವ ನಿಧಿ ಬಗ್ಗೆ ತಿಳಿದರೆ ಶಾಕ್ ! | Oak Island Mystery In Kannada | YOYO TV Kannada-72nd Independence Day Song | Jana Gana Mana Song | National Anthem of India-ನಾಗರ ಚವತಿ ದಿನದಂದು ಮರೆತು ಹೋಗದೆ ಈ ಸಣ್ಣ ಕೆಲಸ ಮಾಡಿದರೆ ಸಾಕು ನಿಮ್ಮ ಮನೆಯಲ್ಲಿ ಎಲ್ಲ ಶುಭಗಳೇ !-ಇಂದು ಮೊದಲನೆಯ ಮಂಗಳವಾರ ಶ್ರಾವಣ ಮಾಸ ಮರೆತು ಹೋಗದೆ ಈ ಸಣ್ಣ ಕೆಲಸ ಮಾಡಿದರೆ ನೀವು ಅಂದುಕೊಂಡ ಕೆಲಸಗಳು ನೆರವೇರುತ್ತದೆ !-2018 ಒಬ್ಬ ತಂದೆ ಹೇಳಿದ ಜೀವನದ ಸತ್ಯಗಳು!-19 ವರ್ಷಗಳ ನಂತರ ಬಂದ ಈ ವಿಶೇಷ ಶ್ರಾವಣ ಮಾಸ ಇವುಗಳನ್ನು ಮನಗೆ ತಂದುಕೊಂಡರೆ ತಲಾ ತಲಾoತರ ಆಸ್ತಿ ನಿಮಗೆ ಒಲಿಯುತ್ತದೆ !-ಆಗಸ್ಟ್ 11ರಂದು ಭೀಮನ ಅಮಾವಾಸ್ಯೆ ನಂತರ ಈ ಮೂರು ರಾಶಿಗಳಿಗೆ ಅದೃಷ್ಟವೇ ಅದೃಷ್ಟ !-ಭೀಮನ ಅಮಾವಾಸ್ಯೆ ವ್ರತವನ್ನು ಏಕೆ ಮಾಡಬೇಕು ? ಈ ಅಮಾವಾಸ್ಯೆಯ ಪೌರಾಣಿಕ ಕಥೆ ! Bheemana Amavasya 2018 in Kannada-ಭೀಮನ ಅಮಾವಾಸ್ಯೆ ಹಬ್ಬ ಮಾಡುಕೊಳ್ಳುವುದಕ್ಕೆ ಕಾರಣ ಯಾರು ಗೊತ್ತಾ..ಈ ಹಬ್ಬ ಹೇಗೆ ಮಾಡಿಕೊಳ್ಳಬೇಕು ಇಲ್ಲಿದೆ ವಿವರ !
ಸಿನಿಮಾ

ಆದ್ದರಿಂದ ಅಂತಹ ಅವಕಾಶ ಸಿಕ್ಕಾಗ ಖಂಡಿತ ಬಿಡುವುದಿಲ್ಲ ಅಂತ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಸಿನಿಮಾರಂಗದಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡಿದ್ದಾರೆ. ಇವರು ಒಂದು ಸಿನಿಮಾ ಮುಗಿಯುವವರೆಗೂ ಮತ್ತೊಂದು ಚಿತ್ರದ ಬಗ್ಗೆ ಮತ್ತು ಡೇಟ್ಸ್ ಗಳ ಬಗ್ಗೆ ಆಗಲಿ ಎಲ್ಲಿಯೂ ಮಾತನಾಡುವುದಿಲ್ಲ.

ದರ್ಶನ್ ಕೆಲಸದಲ್ಲಿ ಯಾವಾಗಲೂ ಶಿಸ್ತು ಕಾಪಾಡುತ್ತಾರೆ. ಅಷ್ಟೇ ಅಲ್ಲದೇ ನಿರ್ದೇಶಕರಿಗೆ ಇಷ್ಟೇ ದಿನ ಡೇಟ್ಸ್ ಕೊಡುವುದು ಎಂದು ನಿರ್ಧಾರ ಮಾಡುತ್ತಾರೆ. ಆದರೆ ಕೆಲವೇ ಕೆಲ ನಿರ್ದೆಶಕರಿಗೆ ಚಾಲೆಂಜಿಂಗ್ ಸ್ಟಾರ್ ಮೊದಲ ಆದ್ಯತೆ ಕೊಡುತ್ತೇನೆ ಎಂದು ಹೇಳಿದ್ದಾರೆ.

ದರ್ಶನ್ ಅಭಿನಯದ 50 ನೇ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. 50 ನೇ ಚಿತ್ರ ಪೌರಾಣಿಕ ಸಿನಿಮಾ ಆಗಿರುವುದರಿಂದ ಖುಷಿಯಾಗಿದ್ದಾರೆ. ಪೌರಾಣಿಕ ಮತ್ತು ಐತಿಹಾಸಿಕ ಸಿನಿಮಾ ಮಾಡಲು ಬರುವ ನಿರ್ದೇಶಕರಿಗೆ ದರ್ಶನ್ ಮೊದಲ ಆದ್ಯತೆ ನೀಡುತ್ತಾರೆ ಎಂದು ತಿಳಿದು ಬಂದಿದೆ.

ದರ್ಶನ್ ಕಾಲ್ ಶೀಟ್ ಪಡೆದುಕೊಳ್ಳಲು ನಿರ್ದೇಶಕರು ಕ್ಯೂನಲ್ಲಿ ನಿಂತಿರುತ್ತಾರೆ. ಇಂತಹ ಸಮಯದಲ್ಲಿ ಐತಿಹಾಸಿಕ ಮತ್ತು ಪೌರಾಣಿಕ ಕಥೆ ಮಾಡಿರುವ ನಿರ್ದೇಶಕರಿಗೆ ದರ್ಶನ್ ಡೇಟ್ಸ್ ಕೊಡುತ್ತಾರಾ ಎನ್ನುವ ಪ್ರಶ್ನೆಗೆ ದರ್ಶನ್ ಉತ್ತರಿಸಿದ್ದು, ಅಂತಹ ನಿರ್ದೇಶಕ ಮತ್ತು ನಿರ್ಮಾಪಕರಿಗೆ ಆದ್ಯತೆ ನೀಡುತ್ತೇನೆ. ಅದಕ್ಕಾಗಿ ಕಮರ್ಷಿಯಲ್ ಚಿತ್ರಗಳನ್ನ ಪಕ್ಕಕ್ಕೆ ಇಡುತ್ತೇನೆ ಎಂದು ತಿಳಿಸಿದ್ದಾರೆ.

ಕನ್ನಡ ಸಿನಿಮಾರಂಗದಲ್ಲಿ ಐತಿಹಾಸಿಕ ಮತ್ತು ಪೌರಾಣಿಕ ಚಿತ್ರಗಳನ್ನ ನಿರ್ಮಾಣ ಮಾಡುವವರು ತುಂಬಾ ಕಡಿಮೆ. ಇಂತಹ ಚಿತ್ರ ಮಾಡುತ್ತೀನಿ ಅಂತ ಬರುವವರೇ ಕಡಿಮೆ. ಆದ್ದರಿಂದ ಅಂತಹ ಅವಕಾಶ ಸಿಕ್ಕಾಗ ಖಂಡಿತ ಬಿಡುವುದಿಲ್ಲ ಅಂತ ದರ್ಶನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

To Top