ಸಿನಿಮಾ

ಏಪ್ರಿಲ್ ತಿಂಗಳ ಅಂತ್ಯದಲ್ಲಿ ಕುರುಕ್ಷೇತ್ರ ಆಡಿಯೋ ಬಿಡುಗಡೆ

ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಸೆಟ್ ನಿಂದ ಅಭಿಮಾನಿಗಳಿಗೆ ಹೊಸದೊಂದು ಸುದ್ದಿ ಹೊರ ಬಿದ್ದಿದೆ. ಕುರುಕ್ಷೇತ್ರ ಸಿನಿಮಾದ 2ಡಿ ಮತ್ತು 3ಡಿ ಹಾಡುಗಳ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.
ಕುರುಕ್ಷೇತ್ರ ಪೌರಾಣಿಕ ಸಿನಿಮಾ ಆಡಿಯೋ ಹಕ್ಕುಗಳನ್ನು ಬಹು ದೊಡ್ಡ ಮೊತ್ತಕ್ಕೆ ಲಹರಿ ಕಂಪನಿಗೆ ಮಾರಾಟವಾಗಿದೆ, ಇದೇ ವೇಳೆ ಮೆಗಾ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಲಾಗಿದ್ದು, ಏಪ್ರಿಲ್ ತಿಂಗಳ ಅಂತ್ಯದಲ್ಲಿ ಆಡಿಯೋ ಬಿಡುಗಡೆಯಾಗಲಿದೆ. ಹರಿಕೃಷ್ಣ ಸಂಗೀತ ನಿರ್ದೇಶಿಸಿದ್ದು, ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಶ್ಲೋಕ ಹಾಗೂ ಸ್ಕಂದ ಪದ್ಯಗಳಿರುವ ನಾಲ್ಕು ಹಾಡುಗಳು ಸಿನಿಮಾದಲ್ಲಿವೆ.

Click to comment

Leave a Reply

Your email address will not be published. Required fields are marked *

To Top