ಸಿನಿಮಾ

ಯಶ್ ಹೇಳಿದ್ದ ಕೆಜಿಎಫ್ ಸಿನಿಮಾ ಡೈಲಾಗ್ ಸಖತ್ ವೈರಲ್ !

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾದ ಚಿತ್ರೀಕರಣ ಕೊನೆಯ ಹಂತಕ್ಕೆ ಬಂದು ತಲುಪಿದೆ. ‘ಕೆಜಿಎಫ್’ ಚಿತ್ರ ಯಾವಾಗ ಬಿಡುಗಡೆ ಆಗುತ್ತೆ ಎಂದು ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. ಮೇಕಿಂಗ್ ಮತ್ತು ಪೋಸ್ಟರ್ ಗಳ ಮೂಲಕ ಚಿತ್ರದ ಬಗ್ಗೆ ದಿನೇ ದಿನೇ ಕುತೂಹಲ ಹೆಚ್ಚಾಗುತ್ತಿದೆ. ಇತ್ತೀಚಿಗಷ್ಟೆ ಯಶ್ ಖಾಸಗಿ ಕಾರ್ಯಕ್ರಮದ ವೇದಿಕೆ ಮೇಲೆ ಹೇಳಿದ ‘ಕೆಜಿಎಫ್’ ಚಿತ್ರದ ಮಾಸ್ ಡೈಲಾಗ್ ಸಖತ್ ವೈರಲ್ ಆಗಿದೆ. ಈ ಹಿಂದೆಯೇ ರಾಕಿಂಗ್ ಸ್ಟಾರ್ ಯಶ್ ವಾಹಿನಿಯಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ ಕೆಜಿಎಫ್ ಸಿನಿಮಾದ ಡೈಲಾಗ್ ಹೇಳಿದ್ರು. ಆರಂಭದ ದಿನಗಳಲ್ಲಿ ಯಶ್ ಹೇಳಿದ್ದ ಆ ಡೈಲಾಗ್ ಸಖತ್ ವೈರಲ್ ಆಗಿತ್ತು. ಈಗ ಹೇಳಿರುವ ಡೈಲಾಗ್ ಎಲ್ಲರ ವಾಟ್ಸ್ ಆಪ್ ಗಳ ಸ್ಟೇಟಸ್ ಆಗಿ ಬದಲಾಗಿದೆ.

“ರಕ್ತದ ವಾಸನೆ ಕಂಡು ಬೇಜಾನ್ ಮೀನುಗಳು ಒಟ್ಟಿಗೆ ಬಂದ್ ಬಿಡ್ತವೆ, ಆದರೆ ಆ ಮೀನುಗಳಿಗೆ ಗೊತ್ತಿಲ್ಲ, ಆ ರಕ್ತ ಮೀನುಗಳನ್ನ ಬೇಟೆ ಆಡುವ ತಿಮಿಂಗಲದ್ದು ಅಂತ”. ಈ ಮಾಸ್ ಡೈಲಾಗ್ ‘ಕೆಜಿಎಫ್’ ಸಿನಿಮಾದಲ್ಲಿದೆ ಎಂದು ಖುದ್ದು ಯಶ್ ಅವರೇ ಹೇಳಿದ್ದಾರೆ.

ಯಶ್ ‘ಕೆಜಿಎಫ್’ ಸಿನಿಮಾ ಬಗ್ಗೆ ಹೇಳುತ್ತಿರುವ ಎರಡನೇ ಡೈಲಾಗ್ ಇದಾಗಿದ್ದು ಇದರಿಂದಲೇ ಪ್ರೇಕ್ಷಕರು, ಅಭಿಮಾನಿಗಳು ಸಿನಿಮಾ ಎಷ್ಟರ ಮಟ್ಟಿಗೆ ಮಾಸ್ ಪೀಲ್ ಕೊಡುತ್ತೆ ಎನ್ನುವುದನ್ನ ಲೆಕ್ಕಾಚಾರ ಹಾಕಿದ್ದಾರೆ.

Click to comment

Leave a Reply

Your email address will not be published. Required fields are marked *

To Top