ಸಿನಿಮಾ

ಚಿರಂಜೀವಿ ಸರ್ಜಾ – ಮೇಘನಾ ರಾಜ್ ಮದುವೆ ಮೇ 2ರಂದು ಮದುವೆ

ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಮದುವೆ ಹಿಂದೂ ಸಂಪ್ರದಾಯದಂತೆ ಮೇ 2ರಂದು ಅರಮನೆ ಮೈದಾನದ ವೈಟ್ ಪೆಟಲ್ಸ್‌‌‌ನಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ನಿನ್ನೆ ಚಿರು-ಮೇಘನಾ ಕೋರಮಂಗಲದ ಸೆಂಟ್ ಅಂಥೋನಿ ಚರ್ಚ್‍ನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾಗಿದ್ದಾರೆ . ಮೇಘನಾ ತಾಯಿ ಪ್ರಮಿಳಾ ಜೋಷಾಯ್‌ ಕ್ರೈಸ್ತ ಸಮೂದಾಯಕ್ಕೆ ಸೇರಿರುವುದರಿಂದ ನಿನ್ನೆ ಕ್ರಿಶ್ಚಿಯನ್ ಸಂಪ್ರದಾಯದಂತೆ ಇಬ್ಬರೂ ವಿವಾಹವಾಗಿದ್ದಾರೆ. ಎರಡೂ ಕುಟುಂಬದವರು ಚರ್ಚ್‍ನಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮದುವೆ ಶಾಸ್ತ್ರ ನಡೆಯಿತು.ಮೇಘನಾ ಬಿಳಿ ಬಣ್ಣದ ಫ್ರಾಕ್‌‌ ಹಾಗೂ ಚಿರಂಜೀವಿ ಕಪ್ಪು ಸೂಟ್‍ನಲ್ಲಿ ಬಹಳ ಅಂದವಾಗಿ ಕಾಣಿಸುತ್ತಿದ್ದರು. ಎರಡೂ ಕುಟುಂಬದ ಆಪ್ತ ವರ್ಗ ಈ ವಿವಾಹ ಸಮಾರಂಭದಲ್ಲಿ ಭಾಗಿಯಾಗಿತ್ತು. ಅರ್ಜುನ್ ಸರ್ಜಾ, ಐಶ್ವರ್ಯ ಅರ್ಜುನ್, ಪ್ರಜ್ವಲ್ ದೇವರಾಜ್, ಪನ್ನಗ, ಧ್ರುವ ಸರ್ಜಾ ಮುಂತಾದವರು ಈ ಮದುವೆಯಲ್ಲಿ ಪಾಲ್ಗೊಂಡಿದ್ದರು.

Click to comment

Leave a Reply

Your email address will not be published. Required fields are marked *

To Top