ಆರೋಗ್ಯ

ಹಸಿವೆಯಲ್ಲಿ ತಿನ್ನಬಾರದ ಕೆಲ ಆಹಾರಗಳು

ಆಹಾರದ ವಿಚಾರದಲ್ಲಿ ನಮ್ಮ ಅರಿವು ಅಷ್ಟಕಷ್ಟಕ್ಕೆಯೇ. ನಮಗೆ ಯಾವಾಗ ಏನು ಸಿಗುತ್ತೋ, ಹಸಿವಾದಾಗ ಏನು ಸಿಕ್ಕರೂ ಸೇವಿಸಿಬಿಡುತ್ತೇವೆ. ಆದರೆ, ಹಸಿವೆಯಲ್ಲಿ ತಿನ್ನಬಾರದ ಕೆಲ ಆಹಾರಗಳಿರುತ್ತವೆ. ಇವುಗಳನ್ನು ಸೇವಿಸಿದರೆ ಆ್ಯಸಿಡಿಟಿ ಸೇರಿದಂತೆ ಕೆಲವಾರು ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಇಂಥ ಕೆಲ ಪ್ರಮುಖ ಆಹಾರಗಳ ವಿವರಣೆ ಇಲ್ಲಿದೆ.

* ಟೀ, ಕಾಫಿ:
ಬೆಳಗ್ಗೆ ಎದ್ದೊಡನೆ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸ ಸಾಕಷ್ಟು ಮಂದಿಗೆ ಇರುತ್ತದೆ. ಆದರೆ, ಕೆಫೀನ್ ಅಂಶವಿರುವ ಈ ಪೇಯಗಳನ್ನು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಅಸಿಡಿಟಿಗೆ ಕಾರಣವಾಗಬಹುದು. ದಿನಪೂರ್ತಿ ಎದೆಯುರಿ, ಅಜೀರ್ಣತೆ ಬಾಧಿಸಬಹುದು. ಪಚನಕ್ರಿಯೆಗೆ ಕಾರಣವಾಗುವ ಗ್ಯಾಸ್ಟ್ರಿಕ್ ಜ್ಯೂಸ್’ಗಳ ಸ್ರವಿಕೆಗೆ ಕೆಫೀನ್’ಗಳು ತಡೆಯೊಡ್ಡುತ್ತವೆ.

* ಬಾಳೆಹಣ್ಣು:
ಸೂಪರ್ ಫುಡ್ ಎನ್ನಲಾಗುವ ಇದು ಜೀರ್ಣಕ್ರಿಯೆಗೆ ಸಹಕಾರಿ. ಬಾಳೆಹಣ್ಣಿನಲ್ಲಿ ಮ್ಯಾಗ್ನೀಶಿಯಮ್ ಮತ್ತು ಪೊಟ್ಯಾಶಿಯಮ್ ಅಂಶ ಹೇರಳವಾಗಿರುತ್ತದೆ. ಖಾಲಿ ಹೊಟ್ಟೆಗೆ ಸೇರಿದಾಗ ರಕ್ತದಲ್ಲಿರುವ ಇವುಗಳ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗುತ್ತದೆ.

* ಟೊಮ್ಯಾಟೋ:
ಇವುಗಳಲ್ಲಿ ವಿಟಮಿನ್ ಸಿ ಮತ್ತು ನ್ಯೂಟ್ರಿಯೆಂಟ್ಸ್ ಅಂಶ ಬಹಳಷ್ಟಿರುತ್ತವೆ. ಆದರೆ, ಇದರಲ್ಲಿರುವ ಟ್ಯಾನಿಕ್ ಆ್ಯಸಿಡ್’ನಿಂದ ದೇಹದೊಳಗೆ ಅಸಿಡಿಟಿ ಉಂಟಾಗುತ್ತದೆ. ಹೀಗಾಗಿ, ಟೊಮೆಟೋವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸದಿರುವುದು ಲೇಸು.

* ಹಸಿರು ತರಕಾರಿ:
ಸೌತೆಕಾಯಿಯಂತಹ ಹಸಿ ಹಸಿರು ತರಕಾರಿಯನ್ನು ಖಾಲಿ ಹೊಟ್ಟೆಯಲ್ಲಿ ತಿಂದಾಗ ಹೊಟ್ಟೆನೋವು, ಎದೆಯುರಿ ಕಾಣಿಸಬಹುದು.

* ಪಿಯರ್ಸ್(ಪೇರಳೆಹಣ್ಣು):
ಇವುಗಳಲ್ಲಿ ಬಹಳ ಒರಟಾದ ಫೈಬರ್ ಅಂಶವಿರುತ್ತದೆ. ಖಾಲಿ ಹೊಟ್ಟೆಯಲ್ಲಿ ತಿಂದಾಗ ಈ ಫೈಬರ್’ಗಳು ದೇಹದೊಳಗಿನ ಸೂಕ್ಷ್ಮ ಮ್ಯೂಕಸ್ ಮೆಂಬ್ರೇನ್’ಗಳಿಗೆ ಹಾನಿ ಮಾಡಬಹುದು.

* ಕಿತ್ತಳೆ, ಮೂಸಂಬಿ, ನಿಂಬೆ:
ಇವುಗಳಲ್ಲಿರುವ ಫ್ರೂಟ್ ಆ್ಯಸಿಡ್’ಗಳು ಎದೆಯುರಿ ಮತ್ತು ಗ್ಯಾಸ್ಟ್ರಿಕ್ ತೊಂದರೆಗೆ ಕಾರಣವಾಗಬಹುದು.

* ಯೋಗರ್ಟ್& ಮೊಸರು:
ಇವುಗಳನ್ನು ತಿಂದರೆ ಹೈಡ್ರೋಕ್ಲೋರಿಕ್ ಆ್ಯಸಿಡ್ ಉತ್ಪತ್ತಿಯಾಗುತ್ತದೆ. ಇದು ಆ ಯೋಗರ್ಟ್’ನಲ್ಲಿ ಲ್ಯಾಕ್ಟಿಕ್ ಆ್ಯಸಿಡ್ ಉತ್ಪಾದಿಸುವ ಬ್ಯಾಕ್ಟೀರಿಯಾವನ್ನು ಕೊಂದು ಆ ಮೂಲಕ ಅಸಿಡಿಟಿಗೆ ಕಾರಣವಾಗುತ್ತದೆ.

Click to comment

Leave a Reply

Your email address will not be published. Required fields are marked *

To Top