ಸಿನಿಮಾ

ಕಾಸ್ಟಿಂಗ್ ಕೌಚ್ ಬಗ್ಗೆ ಖ್ಯಾತ ನಟಿ ರಾಗಿಣಿ

tolly woodನಲ್ಲಿ ಸಂಚಲನ ಮೂಡಿಸಿದ casting couch ಈಗ ಸ್ಯಾಂಡಲ್ ವುಡ್ ನಲ್ಲಿ ಕೂಡ ಸುದ್ದಿ ಯಾಗಿದೆ ಈಗ ಖ್ಯಾತ ನಟಿ ರಾಗಿಣಿ ದ್ವಿವೇದಿ ಅವರು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ವಿಚಾರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಅದೊಂದು ವೈಯಕ್ತಿಕ ವಿಚಾರವಾಗಿದೆ. ಅಂತಹ ಪರಿಸ್ಥಿತಿ ಎದುರಾದ ಸಂದರ್ಭದಲ್ಲಿ ಹೇಗೆ ನಿಭಾಯಿಸುತ್ತಾರೆ ಎಂಬುದು ಇಬ್ಬರಿಗೂ ಸಂಬಂಧಿಸಿರುತ್ತದೆ ಎಂದು ಹೇಳಿದ್ದಾರೆ.
ಕಾಸ್ಟಿಂಗ್ ಕೌಚ್ ಎಂಬುದು ಕೆಟ್ಟ ಸಂಸ್ಕೃತಿಯಾಗಿದೆ. ನನಗೆ ಎಂದಿಗೂ ಅಂತಹ ಪರಿಸ್ಥಿತಿ ಎದುರಿಸಿಲ್ಲ. ಈ ಬಗ್ಗೆ ಮುಕ್ತವಾಗಿ ಹೇಳಿಕೊಂಡಾಗಲೇ ಅದನ್ನು ತೊಲಗಿಸಲು ಸಾಧ್ಯ. ಆದರೆ, ಅತಿಯಾಗಿ ಅದರ ಬಗ್ಗೆಯೇ ಮಾತನಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ
’ಒಂದು ಕೈ ಸೇರಿದರೆ ಚಪ್ಪಾಳೆ ಆಗಲ್ಲ. ಕಾಸ್ಟಿಂಗ್ ಕೌಚ್ ಕೂಡ ಅದೇ ರೀತಿ. ಇದು ಅವರವರ ವೈಯಕ್ತಿಕ ವಿಚಾರ. ಆದರೆ ಕಾಸ್ಟಿಂಗ್ ಕೌಚನ್ನು ನಾನು ಯಾವೊತ್ತು ಫೇಸ್‍ ಮಾಡಿಲ್ಲ. ನನ್ನ ಕರಿಯರ್, ನನ್ನದೇ ಸ್ಟೈಲಲ್ಲಿ, ಸಿದ್ಧಾಂತಗಳ ಪ್ರಕಾರ ನಡೆಯುತ್ತಿದೆ. ಹಾಗಾಗಿ ಈ ರೀತಿಯ ಪರಿಸ್ಥಿತಿ ನನಗೆ ಎದುರಾಗಿಲ್ಲ ಎಂದಿದ್ದಾರೆ ರಾಗಿಣಿ.
ಕಾಸ್ಟಿಂಗ್ ಕೌಚ್ ಬಗ್ಗೆ ನಡೆಯುತ್ತಿರುವ ಚರ್ಚೆ ನಿಜಕ್ಕೂ ಸ್ವಾಗತಾರ್ಹ. ಈ ಬಗ್ಗೆ ನಾವು ಓಪನ್ ಆಗಿ ಮಾತನಾಡಿದಷ್ಟೂ ನಮ್ಮ ಸುತ್ತಲೂ ಏನಾಗುತ್ತಿದೆ ಎಂದು ಜನಕ್ಕೆ ಗೊತ್ತಾಗುತ್ತದೆ. ಆದರೆ ಇದನ್ನೇ ಸಿಕ್ಕಾಪಟ್ಟೆ ಚರ್ಚಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ

Click to comment

Leave a Reply

Your email address will not be published. Required fields are marked *

To Top