ರಾಜಕೀಯ

ಯಡಿಯೂರಪ್ಪನ ತವರು ಜಿಲ್ಲೆಯಲ್ಲಿ ಸಿದ್ದರಾಮಯ್ಯನ ಪವರ್

ಸಿಎಂ ಸಿದ್ದರಾಮಯ್ಯ ನವರು ಬಿ ಎಸ್ ಯಡಿಯೂರಪ್ಪ ನವರ ತವರು ಕ್ಷೇತ್ರವಾದ ಶಿಕಾರಿಪುರದಲ್ಲಿ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ ಕಾರಿದರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಪರವಾಗಿ ಪ್ರಚಾರದಲ್ಲಿ ಪಾಲ್ಗೊಂಡಿದ್ದರು .

ಶಿಕಾರಿಪುರದಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೋಣಿ ಮಾಲ್ತೇಶ್ ಅವರ ಪರ ಮತಯಾಚನೆ ಮಾಡುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಅವರು ತೀವ್ರವಾಗಿ ವಾಗ್ದಾಳಿ ನಡೆಸಿದರು.

ಗೋಣಿ ಮಾಲ್ತೇಶ್ ಅವರು ಶಿಕಾರಿಪುರದ ಮಗ. ಯಡಿಯೂರಪ್ಪ ಬುಕನಕೆರೆಯವರು. ನಿಮ್ಮ ಕ್ಷೇತ್ರದ ಮಗ ಮಾಲ್ತೇಶ್ ಅವರಿಗೆ ಹಾಕಿ, ಗೆಲವು ಸಾಧಿಸುವಂತೆ ಮಾಡಿ. ಇತಿಹಾಸದಲ್ಲಿಯೇ ಮುಖ್ಯಮಂತ್ರಿಯಾಗಿ ಜೈಲಿಗೆ ಹೋದ ವ್ಯಕ್ತಿಯೆಂದರೆ ಅದು ಬಿ.ಎಸ್.ಯಡಿಯೂರಪ್ಪ. ಜೈಲಿಗೆ ಹೋದವರನ್ನು ಬಿಜೆಪಿ ನಿಜವಾಗಲೂ ಮುಖ್ಯಮಂತ್ರಿ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿ ಮಾಡಲು ಹೊರಟಿದೆಯೇ? ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ಕರ್ನಾಟಕದಲ್ಲಿ ತಮ್ಮ ಸರ್ಕಾರದ ಮಾಡಿರುವ ಅಭಿವೃದ್ಧಿ ಯೋಜನೆಗಳನ್ನು ಸಿದ್ದರಾಮಯ್ಯ ಅವರು ವಿವರಿಸಿದ್ದಾರೆ. ಶಿಕಾರಿಪುರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ರೈತರ ಕಲ್ಯಾಣಕ್ಕಾಗಿ ರೂ1,800 ಕೋಟಿ ಬಿಡುಗಡೆ ಮಾಡಿದ್ದೆ. ಯಡಿಯೂರಪ್ಪ ರೈತ ವಿರೋಧಿ. ನೀಡಿದ್ದ ಯಾವೊಂದೂ ಭರವಸೆಯನ್ನೂ ಇಡೇರಿಸಿಲ್ಲ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಅಭಿವೃದ್ಧಿಗಾಗಿ ಬಿಡುಗಡೆ ಮಾಡಿದ್ದ ಹಣವನ್ನು ಯಡಿಯೂರಪ್ಪ ಅವರು, ಬಿಜೆಪಿ ಅಧಿಕಾರಾವಧಿಯಲ್ಲಿ, ಸಾಗರದಲ್ಲಿರುವ ತಾವು ನಿರ್ಮಿಸುತ್ತಿದ್ದ ಕಾಲೇಜು ನವೀಕರಣಕ್ಕೆ ಬಳಸಿಕೊಂಡಿದ್ದಾರೆಂದು ಆರೋಪಿಸಿದ್ದಾರೆ.

ಬಿಜೆಪಿ ಪ್ರತಿನಿಧಿಗಳು ಹಾಗೂ ಯಡಿಯೂರಪ್ಪ ಅವರು ಯಾವಾಗಲೂ ಗೆಲವಿನ ಚಿನ್ಹೆಗಳನ್ನು ತೋರಿಸುತ್ತಿರುತ್ತಾರೆ. ಜೈಲಿನೊಳಗೆ ಹೋಗುವಾಗಲೂ ಹಾಗೂ ಹೊರಗೆ ಬರುವಾಗಲೂ ಗೆಲುವಿನ ಚಿನ್ಹೆಯನ್ನು ತೋರಿಸುತ್ತಾರೆ. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ಪದೇ ಪದೇ ರಾಜ್ಯಕ್ಕೆ ಭೇಟಿ ನೀಡುವುದರಿಂದ ಬಿಜೆಪಿ ಗೆಲವು ಸಾಧಿಸಲು ಸಾಧ್ಯವಿಲ್ಲ. ಅವರ ಪಕ್ಷ ಎಂದಿಗೂ ಗೆಲವು ಸಾಧಿಸುವುದಿಲ್ಲ ಎಂದಿದ್ದಾರೆ.

Click to comment

Leave a Reply

Your email address will not be published. Required fields are marked *

To Top