ರಾಜಕೀಯ

ಬಾದಾಮಿ ಕ್ಷೇತ್ರದ ಪ್ರಣಾಳಿಕೆ ಬಿಡುಗಡೆ

ವಿಧಾನಸಭಾ ಚುನಾವಣೆಯ ಹೈ ವೋಲ್ಟೇಜ್ ಕ್ಷೇತ್ರವಾಗಿದ್ದ ಬಾದಾಮಿ ಕ್ಷೇತ್ರವು ಎಲ್ಲರ ಗಮನವನ್ನು ತನ್ನತ್ತ ಸೆಳೆದಿದೆ ಯಾಕಂದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸಿಎಂ ಸಿದ್ದರಾಮಯ್ಯ ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಬಿ ಶ್ರೀರಾಮುಲು ಕಣದಲ್ಲಿದ್ದಾರೆ ಈ ಬಾದಾಮಿ ಕ್ಷೇತ್ರವು ಜಿದ್ದಾ ಜಿದ್ದಿನ ಕ್ಷೇತ್ರವಾಗಿದೆ .ಈ ಇಬ್ಬರೂ ನಾಯಕರು ಸಹ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ.

ಕಾಂಗ್ರೆಸ್ ಪಕ್ಷ ಬಾದಾಮಿಯ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ಈಗ ಬಿಜೆಪಿಯೂ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಹಲವು ಭರವಸೆಗಳನ್ನು ಕ್ಷೇತ್ರದ ಅಭಿವೃದ್ಧಿಗಾಗಿ ನೀಡಲಾಗಿದೆ.

ಬಾದಾಮಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರು ಪ್ರಣಾಳಿಕೆ ಬಿಡುಗಡೆ ಮಾಡಿದರು. ‘ಸಿದ್ದರಾಮಯ್ಯ ಪಾಪದ ಮೂಟೆ ಅವರನ್ನು ಸೋಲಿಸುತ್ತೆ. ಸಿದ್ದರಾಮಯ್ಯ ಅವರನ್ನು ಸೋಲಿಸುವುದು ನನ್ನ ಉದ್ದೇಶವಲ್ಲ. ಅವರು ಮಾಡಿರುವ ಪಾಪದ ಕೆಲಸಗಳು ಅವರನ್ನು ಸೋಲಿಸುತ್ತವೆ. ಬಾದಾಮಿಯ ಅಭಿವೃದ್ಧಿ ನನ್ನ ಮೂಲ ಉದ್ದೇಶ’ ಎಂದರು.

ಬಾದಾಮಿ ಕ್ಷೇತ್ರದ ಬಿಜೆಪಿ ಪ್ರಣಾಳಿಕೆಯ ಪ್ರಮುಖ ಅಂಶಗಳು

* 24*7 ವಿದ್ಯುತ್ ಪೂರೈಕೆ

* ಕೆಂದೂರು ಕೆರೆ ಹೂಳು ಎತ್ತುವುದು, ಇತರೆ ಕೆರೆಗಳ ಅಭಿವೃದ್ಧಿ

* ರಸ್ತೆಗಳನ್ನು ಕಾಂಕ್ರೀಟಿಕರಣ ಮಾಡುವುದು

* ಕೆರೂರುವಿನಲ್ಲಿ ನೂತನ ಕಣ್ಣಿನ ಆಸ್ಪತ್ರೆ ನಿರ್ಮಾಣ

* ಬಾದಾಮಿಯ ಪ್ರವಾಸಿ ತಾಣಗಳ ಅಭಿವೃದ್ಧಿ

* ಪ್ರತಿ ಬ್ಲಾಕ್‌ಗೆ ಉಚಿತ ಆಂಬ್ಯುಲೆನ್ಸ್ ವ್ಯವಸ್ಥೆ

* ಕೈಮಗ್ಗ ಉತ್ತೇಜಿಸಲು ಕಾರ್ಖಾನೆ ನಿರ್ಮಾಣ

ಈ ರೀತಿಯಾಗಿ ಬಿಜೆಪಿ ಪಕ್ಷವು ಬಾದಾಮಿ ಕ್ಷೇತ್ರದ ಜನತೆಗೆ ಹಲವು ಭರವಸೆಗಳನ್ನು ಕ್ಷೇತ್ರದ ಅಭಿವೃದ್ಧಿಗೆ ನೀಡಲಾಗಿದೆ ಎಂದು ತಿಳಿಸಿದರು .

Click to comment

Leave a Reply

Your email address will not be published. Required fields are marked *

To Top