ರಾಜಕೀಯ

ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಾದಾಯಿ ವಿವಾದವನ್ನು ಬಗೆ ಹರಿಸುತ್ತೇನೆ

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ 6 ತಿಂಗಳೊಳಗಾಗಿ ಮಹದಾಯಿ ವಿವಾದವನ್ನು ಬಗೆ ಹರಿಸಿ ರಾಜ್ಯಕ್ಕೆ ನೀರು ಕೊಡಿಸುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಭರವಸೆ ನೀಡಿದ್ದಾರೆ.

ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಸಿಸಿ ಪಾಟೀಲ್​ ಪರ ಪ್ರಚಾರ ನಡೆಸಿದ ಅಮಿತ್​ ಷಾ ಅವರು ಸಿದ್ದರಾಮಯ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಸರ್ಕಾರದ ಅಹಂಕಾರ ಮುಂಬೈ ಕರ್ನಾಟಕದ ಜನರಿಗೆ ದೊರೆಯಬೇಕಾದ ಮಹದಾಯಿ ನೀರಿನಿಂದ ದೂರವಿಟ್ಟಿದೆ. ನಾವು ಅಧಿಕಾರಕ್ಕೆ ಬಂದ 6 ತಿಂಗಳೊಳಗೆ ಮುಂಬೈ ಕರ್ನಾಟಕದ ಮನೆಮನೆಯ ನಲ್ಲಿಗಳಲ್ಲಿ ಮಹದಾಯಿ ನೀರು ಬರುತ್ತದೆ. ರೈತರ ಹೊಲಗಳಿಗೆ ಮಹದಾಯಿ ನೀರು ಹರಿಯುತ್ತದೆ ಎಂದು ಷಾ ತಿಳಿಸಿದರು.

ಕಾಂಗ್ರೆಸ್​ ಸರ್ಕಾರ ರೈತ ವಿರೋಧಿಯಾಗಿದೆ. ವಂದೇ ಮಾತರಂಗೆ ಗೌರವ ಕೊಡದವರು ನಮ್ಮ ದೇಶದಲ್ಲಿ ಇರುವ ಅವಶ್ಯಕತೆ ಇಲ್ಲ ಎಂದು ಷಾ ಕಾಂಗ್ರೆಸ್​ ನಾಯಕರನ್ನು ಟೀಕಿಸಿದ್ದಾರೆ.

Click to comment

Leave a Reply

Your email address will not be published. Required fields are marked *

To Top