ರಾಜಕೀಯ

ಮೋದಿ ಅವರು ಅವೆಲ್ಲವನ್ನು ಮೀರಿ ಮಾತನಾಡುತಿದ್ದರೆ ಡಾ. ಮನ್ ಮೋಹನ್ ಸಿಂಗ್

ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಬಳಸಿರುವ ಭಾಷೆ ಸಾರ್ವಜನಿಕ ಜೀವನದಲ್ಲಿರುವ ಘನತೆಯನ್ನು ಕುಂದುವಂತೆ ಮಾಡಿದೆ ಎಂದು ಮಾಜಿ ಪ್ರಧಾನಿ ಡಾ.ಮನಮೋಹನ್‍ಸಿಂಗ್ ಆಕ್ಷೇಪ ವ್ಯಕ್ತಪಡಿಸಿದರು. ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಮೃದು ಶೈಲಿಯಲ್ಲೇ ಮೋದಿ ವಿರುದ್ಧ ಖಾರವಾಗಿ ಹೇಳಿಕೆ ನೀಡಿದರು.

ಹಿಂದಿನ ಯಾವ ಪ್ರಧಾನಿಯೂ ಬಂದು ಚುನಾವಣೆಯಲ್ಲಿ ತಮ್ಮ ಅಧಿಕಾರವನ್ನು ಈ ಮಟ್ಟಕ್ಕೆ ದುರುಪಯೋಗಪಡಿಸಿಕೊಂಡಿರಲಿಲ್ಲ. ಚುನಾವಣಾ ಭಾಷಣದಲ್ಲಿ ಭಾಷೆ ಬಳಕೆ ಬಗ್ಗೆ ಎಚ್ಚರದಿಂದಿರಬೇಕು. ಮೋದಿಯವರು ಅವೆಲ್ಲವನ್ನೂ ಮೀರಿ ಮಾತನಾಡುತ್ತಿದ್ದಾರೆ. ಇದು ದೇಶದ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಅಸಮಾಧಾನವ್ಯಕ್ತಪಡಿಸಿದರು.

ಮೋದಿಯವರು ತಮ್ಮ ಭಾಷಣದ ಮೂಲಕ ಸಮಾಜವದಲ್ಲಿ ಬಿರುಕು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ರಾಜಕೀಯ ಕಾರಣಕ್ಕಾಗಿ ತಮ್ಮ ಪರವಾಗಿ ಒಂದಷ್ಟು ಜನರನ್ನು ಗುಂಪುಗೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ದೇಶದ ಸಮಗ್ರತೆಯ ದೃಷ್ಟಿಯಿಂದ ಒಳ್ಳೆಯದಲ್ಲ. ಈಗಲಾದರೂ ಮೋದಿ ಅವರು ಪಾಠಕಲಿತು ವಿಭಜನೆ ನೀತಿ ಕೈಬಿಡಲಿ ಎಂದು ಸಲಹೆ ನೀಡಿದರು.

Click to comment

Leave a Reply

Your email address will not be published. Required fields are marked *

To Top