2018 ಡಿಸೆಂಬರ್ 2ರಂದು ದಶಮಿ ಚಿಕ್ಕ ಸ್ಪಟಿಕ ದಿಂದ ಮನೆಯ ಹತ್ತಿರ ಈ ಕೆಲಸ ಮಾಡಿದರೆ ಹಣದ ಸಮಸ್ಯೆ ತೊಲಗಿ ಹೋಗುತ್ತದೆ !!!-ವಾರಭವಿಷ್ಯ 11-11-2018 To 17-11-2018-ಕೆ.ಜಿ.ಎಫ್' ಸಿನಿಮಾದ ಬಜೆಟ್ ಎಷ್ಟು ಕೋಟಿ ಗೊತ್ತಾ..!-ನೀನು ಯಡ್ಡಿ ಖಾನ್...! ನಾನೂ ಸಿದ್ದು ಖಾನ್...!-ಬಿಜೆಪಿಯಿಂದ 5 ನಾಯಕರು ಯೂಟರ್ನ್ !-ಮನೆಯಲ್ಲಿರುವ ತುಳಸಿಗಿಡ ಒಣಗಿದ್ರೆ ಏನುಆಗುತೆ ನೋಡಿ!See WhatThe Basil Dried In The House Is Dry!AloTVKannada-ಎಟಿಎಂ ಬಳಕೆದಾರರಿಗೆ ಬಹುಮುಕ್ಯವಾದ ಸುದ್ದಿ ತಪ್ಪದೆ ವೀಡಿಯೋನು ನೋಡಿ !See video news for ATM users!AloTVKannada-ಎವುಡ್ರಾ ..ಎಂದುಕಿ ವಚ್ಚಾವು..ಏಮಿ ಕಾವಾಲಿ.ರೆಡ್ಡಿ ಅತ್ತೆಯ ರಂಪಾಟ Reddy mother-in-law fire on the CCB officer-ಕಾಂಗ್ರೆಸ್ ನಾಯಕರೊಂದಿಗೆ ರೆಡ್ಡಿ ಡೀಲ್ ಲಿಂಕ್ !!! janardhan reddy deal link with congress leaders !!!-ಸಮಾಧಿಯಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳುದಕ್ಕೆ cctv ಇಟ್ಟಿದ್ದಾರೆ ನಂತರ ಏನು ನಡೀತು ಎಂದು ಗೊತ್ತಾದರೆ !
ರಾಜಕೀಯ

ನರೇಂದ್ರ ಮೋದಿ ಅವರಿಗೆ ನನ್ನನ್ನು ಕಂಡರೆ ಭಯ ಸಿದ್ದರಾಮಯ್ಯ

ಪ್ರಧಾನಿ ನರೇಂದ್ರ ಮೋದಿ ಅವರು ಪದೇ ಪದೇ ನನ್ನ ಹೆಸರು ಹೇಳುತ್ತಿರುವುದಕ್ಕೆ ನನಗೆ ಸಂತೋಷ. ನನ್ನ ಕಂಡರೆ ಭಯ ಇರುವುದರಿಂದ ಮೋದಿ ಪದೇ ಪದೇ ನನ್ನನ್ನು ಟಾರ್ಗೆಟ್​ ಮಾಡ್ತಾ ಇದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದ್ದಾರೆ.

ವಾಚ್ ಬಗ್ಗೆ ಮಾತನಾಡುವ ಮೋದಿ ಸೂಟ್ ಬಗ್ಗೆ ಮಾತನಾಡಲಿ. ಆ ಸೂಟ್ ಎಲ್ಲಿಂದ ಬಂತು? ಹೇಗೆ ಬಂತು? ಸೂಟ್​ಗೆ ತೆರಿಗೆ ಕಟ್ಟಿದ್ದಾರಾ? ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ನಾನು ಯುದ್ಧಭೂಮಿಯ ಸೇನಾಧಿಪತಿ ಇದ್ದಂತೆ. ಸೇನಾಧಿಪತಿ ಧೈರ್ಯದಿಂದ ನುಗ್ಗಿದ್ರೆ, ಸೈನಿಕರೂ ಮುನ್ನುಗ್ಗುತ್ತಾರೆ. ನಾನು ಈ ಚುನಾವಣೆಯ ಕ್ಯಾಪ್ಟನ್ ಆಗಿದ್ದು, ನನಗೆ ಯಾವುದೇ ಆತಂಕ ಇಲ್ಲ. ಕ್ಯಾಪ್ಟನ್ ನರ್ವಸ್ ಆದರೆ, ನನ್ನ ಸೈನಿಕರೂ ನರ್ವಸ್ ಆಗ್ತಾರೆ‌. ನಾವು ಗೆದ್ದೇ ಗೆಲ್ತೇವೆ, ಮತ್ತೆ ನಾನು ಮುಖ್ಯಮಂತ್ರಿ ಆಗುತ್ತೇನೆ ಎಂಬ ಭರವಸೆಯ ಮಾತುಗಳನ್ನಾಡಿದರು.

ಪ್ರಚಾರಕ್ಕಾಗಿ ನಟ ಸುದೀಪ್​ ಮೈಸೂರಿಗೆ ಬರುವ ವಿಚಾರವಾಗಿ ಮಾತನಾಡಿದ ಅವರು ಮೇ 9ರಂದು ಸುದೀಪ್ ಪ್ರಚಾರಕ್ಕೆ ಬರಬಹುದು. ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆಗೆ ಆಹ್ವಾನ ನೀಡಲು ಸುದೀಪ್ ಹಾಗೂ​ ಅವರ ಚಿಕ್ಕಪ್ಪ ನನ್ನ ಬಳಿ ಬಂದಿದ್ದರು. ಆಗ ಸುದೀಪ್ ಅವರೇ ನನ್ನ ಪರವಾಗಿ ಒಂದು ದಿನ ಪ್ರಚಾರಕ್ಕೆ ಬರುವುದಾಗಿ ಹೇಳಿದ್ದರು. ನಾನು ಮತ್ತೆ ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಸ್ವಯಂ ಪ್ರೇರಣೆಯಿಂದ ಬರುವುದಾದರೆ ಸಂತೋಷ ಎಂದರು.

To Top